ಪಟ್ಟಣದ ರೈತ ಸಂಪರ್ಕ ಕೇಂದ್ರದಲ್ಲಿ ಹೋಬಳಿಯ ರೈತರು ಉತ್ತಮ ಶೇಂಗಾ ಬೀಜ ರಿಯಾಯಿತಿ ದರದಲ್ಲಿ ಪಡೆಯಿರಿ. ಕೃಷಿ ಅಧಿಕಾರಿ ಎನ್ ಹೇಮಂತ್ ನಾಯ್ಕ.

ನಾಯಕನಹಟ್ಟಿ:: ಜೂನ್ .5. ಹೋಬಳಿಯ ರೈತರು ರಿಯಾಯಿತಿ ದರದಲ್ಲಿ ಶೇಂಗಾ ಬಿತ್ತನೆ ಬೀಜ ಪಡೆಯಲಿ ಕೃಷಿ ಅಧಿಕಾರಿ ಎನ್ ಹೇಮಂತ್ ನಾಯ್ಕ ಹೇಳಿದ್ದಾರೆ.
ಪಟ್ಟಣದ ರೈತ ಸಂಪರ್ಕ ಕೇಂದ್ರದ ಆವರಣದಲ್ಲಿ ಬುಧವಾರ ಹೋಬಳಿಯ ನಲಗೇತನಹಟ್ಟಿ ಗೌಡಗೆರೆ ನಾಯಕನಹಟ್ಟಿ ಗ್ರಾಮ ಪಂಚಾಯತಿ ವ್ಯಾಪ್ತಿಯ ರೈತರಿಗೆ ಶೇಂಗಾ ಬಿತ್ತನೆ ಬೀಜ ವಿತರಣೆ ಮಾಡಿ. ಮಾತನಾಡಿದ ಅವರು 2023- 24ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ರೈತ ಸಂಪರ್ಕ ಕೇಂದ್ರ ನಾಯಕನಹಟ್ಟಿ ವತಿಯಿಂದ ಶೇಂಗಾ ಬಿತ್ತನೆ ಬೀಜ ವಿತರಣೆ ಮಾಡುತ್ತಿದ್ದು ನಮ್ಮಲ್ಲಿ ಎರಡು ತಿಳಿಯ ಶೇಂಗಾ ದಾಸ್ತಾನು ಇದೆ ಟಿ ಎಂ ವಿ ಟು ಒಂದು ಪಾಕೆಟ್ ಎಸ್ಸಿ ಎಸ್ಟಿ ಗೆ. 2070. ಜನರಲ್ ಗೆ 2280.

ಕೆ ಸಿಕ್ಸ್ ಶೇಂಗಾ ತಳಿ ಎಸ್ಸಿ ಎಸ್ಟಿಗೆ ಒಂದು ಪಾಕೆಟ್ ಗೆ 2130.
ಜನರಲ್ ಗೆ 2340 ರೂಗಳಿಗೆ ನೀಡಲಾಗುತ್ತದೆ ಆದ್ದರಿಂದ ಹೋಬಳಿಯ ಎಲ್ಲಾ ರೈತರು ರೈತ ಸಂಪರ್ಕ ಕೇಂದ್ರದಲ್ಲಿ ಶೇಂಗಾ ಬಿತ್ತನೆ ಬೀಜ ಪಡೆದುಕೊಳ್ಳಿ ಎಂದು ಕೃಷಿ ಅಧಿಕಾರಿ ಎನ್ ಹೇಮಂತ್ ನಾಯ್ಕ, ಹೋಬಳಿಯ ರೈತರಲ್ಲಿ ಮನವಿ ಮಾಡಿದರು.

ಇದೇ ಸಂದರ್ಭದಲ್ಲಿ ಹೋಬಳಿಯ ವಿವಿಧ ಹಳ್ಳಿಗಳ ರೈತರು ಇದ್ದರು

About The Author

Namma Challakere Local News
error: Content is protected !!