ಪರಿಸರವನ್ನ ನಾವೆಲ್ಲರೂ ಕಾಪಾಡಿದರೆ ಪರಿಸರ ನಮ್ಮನ್ನು ಕಾಪಾಡುತ್ತದೆ

ಯುವ ಪೀಳಿಗೆ ಪರಿಸರ ಅಭಿವೃದ್ಧಿಸಿದರೆ ಮುಂದಿನ ಪೀಳಿಗೆಗೆ ಪರಿಸರವನ್ನ ಕೊಡುಗೆಯಾಗಿ ನೀಡಬಹುದು: ಮುಸ್ತಪ

ಚಿತ್ರದುರ್ಗ: ಪರಿಸರವನ್ನು ನಾವೆಲ್ಲರೂ ಕಾಪಾಡಿದರೆ ಆ ಪರಿಸರ ನಮ್ಮೆಲ್ಲರನ್ನು ಕಾಪಾಡುತ್ತದೆ ಹಾಗೂ ಗಿಡಗಳನ್ನ ಬೆಳೆಸಿ ಅವುಗಳನ್ನು ಪೋಷಿಸಿ ಹೆಮ್ಮರವಾಗಿಸಿದರೆ ನಮಗೆ ಉತ್ತಮವಾದ ಆರೋಗ್ಯ ಲಭಿಸುತ್ತದೆ ಹಾಗಾಗಿ ಪ್ರತಿಯೊಬ್ಬ ವಿದ್ಯಾರ್ಥಿಯು ಪರಿಸರ ದಿನಾಚರಣೆಯನ್ನು ಜೀವನ ಇದಕ್ಕೆ ಆಚರಿಸದೆ ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದಾದಲ್ಲಿ ಮುಂದಿನ ಪೀಳಿಗೆಗೆ ಪರಿಸರವನ್ನ ಕೊಡುಗೆಯಾಗಿ ನೀಡಬಹುದು ಎಂದು ಹಿರೇಗುಂಟನೂರಿನ ಶ್ರೀ ಸ್ವಾಮಿ ವಿವೇಕಾನಂದ ಸ್ವಾತಂತ್ರ್ಯ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರಾದ ಆರ್.ಮುಸ್ತಪ ತಿಳಿಸಿದರು.

ಚಿತ್ರದುರ್ಗ ತಾಲೂಕಿನ ಹಿರೇಗುಂಟನೂರು ಗ್ರಾಮದಲ್ಲಿ ಮಡಿಲು ಗ್ರಾಮೀಣ ಮತ್ತು ನಗರಾಭಿವೃದ್ಧಿ ಸಂಸ್ಥೆ ಹಾಗೂ ಶ್ರೀ ಸ್ವಾಮಿ ವಿವೇಕಾನಂದ ಸ್ವಾತಂತ್ರ್ಯ ಪದವಿ ಪೂರ್ವ ಕಾಲೇಜು ಸಹಯೋಗದೊಂದಿಗೆ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸಸಿ ನೆಡುವ ಕಾರ್ಯಕ್ರಮದಲ್ಲಿ ಸಸಿಗಳನ್ನು ನೆಡುವುದರ ಮೂಲಕ ಪರಿಸರ ದಿನಾಚರಣೆಯನ್ನು ಆಚರಿಸಿ ಮಾತನಾಡಿದರು,
ಗಿಡಗಳನ್ನು ನೆಟ್ಟು ಪೋಷಿಸಿದರೆ ನಮಗೆ ಉತ್ತಮ ಆರೋಗ್ಯ ದೊರೆಯುತ್ತದೆ ವಿನಹ ಪರಿಸರದಿಂದ ಯಾವುದೇ ರೀತಿ ವಿನಾಶಕಾರಿಯಂತು ಆಗುವುದಿಲ್ಲ ಹಾಗಾಗಿ ಪ್ರತಿಯೊಬ್ಬ ವಿದ್ಯಾರ್ಥಿಗಳು ಖಾಲಿ ಜಾಗಗಳಲ್ಲಿ ಹಾಗೂ ಹೊಲಗಳಲ್ಲಿ ಗಿಡಗಳನ್ನು ಬೆಳೆಸುವುದರ ಮೂಲಕ ಪರಿಸರವನ್ನ ಅಭಿವೃದ್ಧಿಸಬೇಕಾಗಿದೆ ಎಂದರು.

ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಮೈತ್ರ ಅವರು ಮಾತನಾಡಿ ಮಾನವ ಪರಿಸರದಿಂದ ಎಷ್ಟೆಲ್ಲ ಲಾಭಗಳನ್ನು ಪಡೆದುಕೊಂಡರು ಸಹ ಪರಿಸರ ಅಭಿವೃದ್ಧಿ ಮಾಡದೆ ಪರಿಸರವನ್ನು ವಿನಾಶದ ಕಡೆಗೆ ತೆಗೆದುಕೊಂಡು ಹೋಗುತ್ತಿದ್ದೇವೆ ಇದೇ ರೀತಿ ಪರಿಸರದ ವಿನಾಶ ಮುಂದುವರೆದರೆ ಮುಂದೊಂದು ದಿನ ಮಾನವನ ಸರ್ವನಾಶ ಖಂಡಿತ ಎಂದರು.

ಚಿತ್ರದುರ್ಗ ಕಾರ್ಯನಿರತ ಪತ್ರಕರ್ತ ಸಂಘದ ಜಿಲ್ಲಾಧ್ಯಕ್ಷ ದಿನೇಶ್ ಗೌಡಗೆರೆ ಮಾತನಾಡಿ ಪ್ರಸ್ತುತ ದಿನಮಾನಗಳಲ್ಲಿ ಮನುಷ್ಯರೆಲ್ಲರೂ ಪರಿಸರ ವಿನಾಶ ಮಾಡುವಂತಹ ಪ್ಲಾಸ್ಟಿಕ್ ತ್ಯಾಜ್ಯ ವಸ್ತುಗಳನ್ನೇ ಯಥೇಚ್ಛವಾಗಿ ಬಳಸುವುದರಿಂದ ಪರಿಸರದ ವಿನಾಶದ ಕಡೆಗೆ ಮಾನವ ಸಾಗುತ್ತಿದ್ದಾನೆ ಅವುಗಳನ್ನು ನಿಯಂತ್ರಿಸಿ ಪರಿಸರವನ್ನ ಅಭಿವೃದ್ಧಿಕಡೆಗೆ ಸಾಗಬೇಕಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಶಿವಮೂರ್ತಿ, ಶ್ರೀಧರ್, ಪೊಲೀಸ್ ಅಧಿಕಾರಿ ಮಂಜಣ್ಣ ಅವರು ವಿದ್ಯಾರ್ಥಿಗಳಿಗೆ ಪರಿಸರ ಜಾಗೃತಿಯನ್ನು ಮೂಡಿಸಿದರು.

ಈ ಒಂದು ಸಂದರ್ಭದಲ್ಲಿ ಮಡಿಲು ಗ್ರಾಮೀಣ ಮತ್ತು ನಗರಾಭಿವೃದ್ಧಿ ಸಂಸ್ಥೆಯ ಅಧ್ಯಕ್ಷರಾದ ಕುಮಾರಸ್ವಾಮಿ, ಕಾರ್ಯದರ್ಶಿ ಆನಂದ್.ಡಿ ಆಲಘಟ್ಟ, ಪ್ರದೀಪ್ ಮಹಾಂತೇಶ್ ದ್ಯಾಮ ಕುಮಾರ್, ಪ್ರವೀಣ್, ಸಂದೀಪ್, ಅಭಿಷೇಕ್, ನಾಗರಾಜ್, ನಿಸಾರ್ ಅಹಮದ್ ಹಾಗೂ ವಿದ್ಯಾರ್ಥಿ ವಿದ್ಯಾರ್ಥಿನಿಯರು ಭಾಗವಹಿಸಿದ್ದರು.

About The Author

Namma Challakere Local News
error: Content is protected !!