ರಾಮಾಂಜನೇಯ ಕೆ.ಚನ್ನಗಾನಹಳ್ಳಿ
ಚಳ್ಳಕೆರೆ : ಅತೀ ಕಡಿಮೆ ಮಳೆ ಬೀಳುವ ಪ್ರದೇಶವೆಂದು ಕರೆಯುವ ಚಳ್ಳಕೆರೆ ತಾಲೂಕಿನಲ್ಲಿ ಮುಂಗಾರು ಹಂಗಾಮಿನಲ್ಲಿ ವಾಡಿಕೆ ಮಳೆಗಿಂತ ಹೆಚ್ಚಿನದಾಗಿ ಮಳೆ ಬಂದು ರೈತರ ಮೊಗದಲ್ಲಿ ಸಂತಸ ಮನೆ ಮಾಡಿದೆ.
ಇನ್ನೂ ರೈತರಿಗೆ ಯಾವುದೇ ರೀತಿಯಲ್ಲಿ ಬಿತ್ತನೆ ಬೀಜಕ್ಕೆ ತೊಂದರೆಯಾಗದAತೆ ಕೃಷಿ ಇಲಾಖೆ ಬಿತ್ತನೆ ಬೀಜ ದಾಸ್ತನು ಮಾಡಲಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ಡಾ.ಅಶೋಕ್ ಹೇಳುತ್ತಾರೆ.
ನಗರದ ಕೃಷಿ ಉತ್ಪನ್ನಮಾರುಕಟ್ಟೆ ಗೋದಾಮಿನಲ್ಲಿ ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡುವ ಶೇಂಗಾ ಗೋದಾಮಿನಲ್ಲಿ ರೈತರಿಗೆ ಶೇಂಗಾ ವಿತರಣೆ ಮಾಡುವ ಮೂಲಕ ಮಾಧ್ಯಮದೊಂದಿಗೆ ಮಾತನಾಡಿದರು
ತಾಲೂಕಿನಲ್ಲಿ ವಾಣಿಜ್ಯ ಬೆಳೆಯಾದ ಶೇಂಗಾ ಬಿತ್ತನೆ ಮಾಡುತ್ತಿರುವುದು ಪ್ರತಿ ವರ್ಷದಂತೆ ಈ ಬಾರಿಯೂ ಬಿತ್ತನೆಬೀಜ ಗೊಬ್ಬರ ಕೊರತೆಯಾಗದಂತೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ, ಬಿತ್ತನೆ ಶೇಂಗಾ ಈಗಾಗಲೇ 20 ಸಾವಿರ ಕ್ವಿಂಟಾಲ್ ದಾಸ್ತಾನು ಮಾಡಲಾಗಿದೆ, ಇನ್ನೂ ಪ್ರತಿ ಆರ್‌ಎಸ್‌ಕೆ ಕೇಂದ್ರಗಳಲ್ಲಿ ರೈತರಿಗೆ ಶೇಂಗಾ ವಿರಣೆ ಮಾಡಲಾಗುತ್ತದೆ, ಇನ್ನೂ ರೈತರಿಗೆ ಬೇಡಿಕೆಗೆ ಅನುಗುಣವಾಗಿ ಬಿತ್ತನೆ ಬೀಜ ವಿತರಣೆ ಮಾಡಲಾಗುತ್ತದೆ ಎಂದರು.
ಸ್ಥಳದಲ್ಲಿ ಶೇಂಗಾ ಬೀಜದ ಬಿಣಮಟ್ಟ ಪರೀಶಿಲನೆಗೆ ರೈತರಿಗೆ ಅವಕಾಶ :
ರೈತರು ಸಹಾ ಖರೀದಿ ಮಾಡುವಾಗ ಸ್ಥಳದಲ್ಲೇ ಬಿತ್ತೆನೆ ಶೇಂಗಾ ಗುಣಮಟ್ಟ ಪರಿಶೀಲನೆ ಮಾಡಿಕೊಂಡು ತೆಗೆದುಕೊಂಡುವ ಹೋಗುವ ವ್ಯವಸ್ಥೆ ಮಾಡಲಾಗುವುದು. ಈಗಾಗಲೆ ಮಳೆಬಂದ ತಕ್ಷಣದ ಬಿತ್ತನೆ ಮಾಡಲು ಅಗತ್ಯ ಗೊಬ್ಬರ ಬೀಜ ಕೊರತೆಯಾಗದಂತೆ ಹಾಗೂ ನಿಗಧಿತ ಬೆಲೆಗಿಂತ ಹೆಚ್ಚಿಗೆ ಮಾರಾಟ ಮಾಡಿದರೆ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ ಬೀಜಗೊಬ್ಬರ ಮಾರಾಟಗಾರರಿಗೆ ಎಚ್ಚರಿಕೆ ಕೂಡ ನೀಡಲಾಗಿದೆ ಎನ್ನುತ್ತಾರೆ.
ಅಕ್ರಮಕ್ಕೆ ಕಡಿವಾಣ ಶೇಂಗಾ ಪ್ರತಿ ಪ್ಯಾಕೇಟ್ ಗೆ ಕ್ಯೂಆರ್ ಕೋಡ್ :
ರಾಜ್ಯದಲ್ಲಿ ಬಾರೀ ಪ್ರಮಾಣದಲ್ಲಿ ಶೇಂಗಾ ಬಿತ್ತನೆ ಬೀಜದಲ್ಲಿ ಅಕ್ರಮ ಮಾಡಲಾಗುತ್ತದೆ ಎಂಬ ಸುದ್ದಿಗೆ ಕಡಿವಾಣ ಹಾಕಲು ಪ್ರತಿ ಪ್ಯಾಕೇಟ್‌ನಲ್ಲಿ ಕ್ಯೂಆರ್ ಕೋಡ್ ಸ್ಕಾö್ಯನ್‌ಮಾಡುವ ಮೂಲಕ ರೈತನ ಎಪ್‌ಐಡಿ ಹಾಗೂ ಹೆಸರು ನಮೂದು ಹಾಗುತ್ತದೆ, ತದನಂತರ ಬಿಲ್ ಮೊತ್ತ ಪಾವತಿಗೆ ಆನ್‌ಲೈನ್ ಕೇಳುತ್ತದೆ ಇದರಿಂದ ಯಾವುದೇ ಅಕ್ರಮಗಳು ನಡೆಯದಂತೆ ಪಾರದರ್ಶಕವಾಗಿ ಬಿತ್ತನೆ ಬೀಜ ವಿತರಣೆ ಯಾಗುತ್ತದೆ.
ಎಲ್ಲೆಲ್ಲಿ ಶೇಂಗಾ ವಿರತಣೆ :
ಚಳ್ಳಕೆರೆ ನಗರದ ಎಪಿಎಂಸಿ ಯಾರ್ಡ್, ಪರಶುರಾಂಪುರದ ಕೃಷ್ಣಭವನ್ ಹಾಗೂ ಕೆಓಎಪ್ ಎರಡು ಕಡೆ ವಿತರಣೆ, ಹಾಗೂ ನಾಯಕನಹಟ್ಟಿ ಹೋಬಳಿಯ ರೈತ ಸಂಪರ್ಕ ಕೇಂದ್ರದ ಎರಡು ಕಡೆಗಳಲ್ಲಿ, ತಳಕು ಕೃಷಿ ಇಲಾಖೆ ಕೇಂದ್ರದಲ್ಲಿ ನಾಲ್ಕು ಕಡೆ ತಳಕು ರೈತ ಸಂಪರ್ಕ ಕೇಂದ್ರ, ದೇವರೆಡ್ಡಿಹಳ್ಳಿ, ದೊಡ್ಡ ಉಳ್ಳಾರ್ತಿ, ರೇಣುಕಾಪುರದದಲ್ಲಿ ವಿತರಣೆ ಮಾಡಲಾಗುತ್ತಿದೆ.
ಸರಕಾರದ ಸಹಾಧನ ಎಷ್ಟು..?
ಈ ಬಾರಿ ಎರಡು ಶೇಂಗಾ ತಳಿಯನ್ನು ತಾಲೂಕಿನಲ್ಲಿ ದಾಸ್ತನು ಮಾಡಲಾಗಿದೆ, ಅದರಲ್ಲಿ ಟಿಎಂವಿ-2 ಹಾಗೂ ಕೆ-6 ಎಂಬ ತಳಿ ಶೇಂಗಾವನ್ನು ರೈತರಿಗೆ ಪರಿಚಯಿಸಲಾಗಿದೆ 30 ಕೆಜಿ ಪ್ಯಾಕೆಟ್‌ಗೆ
ಟಿಎಂವಿ-2ತಳಿಯ ಶೇಂಗಾ ಸಾಮಾನ್ಯ ವರ್ಗದವರಿಗೆ-2280, ಎಸ್ಸಿ, ಎಸ್ಟಿ ವರ್ಗದವರಿಗೆ-2070ಇನ್ನೂ ಕೆ-6 ತಳಿಯ ಶೇಂಗಾ ಸಾಮಾನ್ಯ ವರ್ಗದವರಿಗೆ-2340, ಎಸ್ಸಿ,ಎಸ್ಟಿ ವರ್ಗದವರಿಗೆ-2130 ರಿಯಾಯಿತಿ ದರದಲ್ಲಿ ನೀಡಲಾಗುತ್ತದೆ.
ರೈತರು ಯಾವ ದಾಖಲಾತಿ ನೀಡಬೇಕು :
ಶೇಂಗಾ ಬೀಜಕ್ಕೆ ಬರುವ ರೈತರು ತಪ್ಪದೆ ಜಮೀನು ಹೊಂದಿರುವ ಎಪ್‌ಐಡಿ ಇರುವ ದಾಖಲೆ ಹಾಗೂ ಆಧಾರ್ ಕಾರ್ಡ್, ಸಬ್ಸಿಡಿ ಬೇಕಾದರೆ ಜಾತಿ ಪ್ರಮಾಣ ಪತ್ರ ನೀಡಬೇಕು, ರೈತರುಗೆ ಗೊಂದಲವಾದ ರೀತಿಯಲ್ಲಿ ಪ್ರಚಾರ ಹಾಗೂ ವಿತರಣಾ ಕೇಂದ್ರ ಸ್ಥಳಗಳನ್ನು ನಿಗಧಿ ಮಾಡಿದೆ ಕಛೇರಿ ವೇಳೆ ಬಂದು ಶೇಂಗಾ ಪಡೆಯಬಹುದು ಎನ್ನುತ್ತಾರೆ ಪರುಶುರಾಂಪುರ ಕೃಷಿ ಸಹಾಯಕ ಅಧಿಕಾರಿ ಜೀವನ್.
ಪ್ರತಿ ಶೇಂಗಾ ಪ್ಯಾಕೇಟ್‌ನಲ್ಲಿ ಕ್ಯೂಆರ್ ಕೋಡ್ ಇರುತ್ತದೆ ಇದರಿಂದ ಒಂದು ಪ್ಯಾಕೇಟ್ ಕೂಡ ಮಿಸ್ ಹಾಗುವುದಿಲ್ಲ ಇದರಿಂದ ಅರ್ಹ ಎಲ್ಲಾ ರೈತರಿಗೆ ತಲುಪಿಸಲು ಸರಕಾರವೇ ರೂಪಿಸಿದೆ ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಶೇಂಗಾ ಪಾಕೇಟ್ ಮೇಲೆ ಕ್ಯೂಆರ್ ಕೋಡ್ ಇರುವ ಬಿತ್ತನೆ ಬೀಜದ ಪ್ಯಾಕೇಟ್ ದಾಸ್ತಾನು ಮಾಡಲಾಗುತ್ತಿದೆ
—ಸಹಾಯಕ ಕೃಷಿ ನಿರ್ದೇಶಕ ಡಾ.ಅಶೋಕ್
ಜೂನ್ ತಿಂಗಳಿAದ ಬಿತ್ತನೆ ಸಮಯ ಎಲ್ಲಾ ರೈತರು ಬಿತ್ತನೆಗೆ ಬೇಕಾದ ಬಿತ್ತನೆ ಬೀಜಗಳನ್ನು ಎಲ್ಲಾ ರೈತ ಸಂಪರ್ಕ ಕೇಂದ್ರಗಳಲ್ಲಿ ಲಭ್ಯವಿದೆ, ಮೆಕ್ಕೆಜೋಳ, ನವಣೆ, ತೊಗರಿ, ಅಲಸಂದೆ, ರಾಗಿ, ಸಾವೆ, ಬಿತ್ತನೆ ಬೀಜಗಳನ್ನು ನೀಡಲಾಗುತ್ತಿದೆ ಎಂದು ನಾಯಕನಹಟ್ಟಿ ರೈತ ಸಂಪರ್ಕ ಕೇಂದ್ರದ ಎಓ.ಹೇಮಂತ್ ನಾಯ್ಕ್, ತಳಕು ರೈತ ಸಂಪರ್ಕ ಕೇಂದ್ರ ಎಓ.ಮಂಜುನಾಥ್, ಕಸಬಾ ಕೇಂದ್ರದ ತಿಪ್ಪೆಸ್ವಾಮಿ, ಪರುಶುರಾಂಪುರ ಕೇಂದ್ರದ ಜೀವನ್ ಹೇಳುತ್ತಾರೆ.