ಚಳ್ಳಕೆರೆ ನ್ಯೂಸ್ :
ಪರಿಸರ ಜಾಥಕ್ಕೆ ಚಾಲನೆ ನೀಡಿದ ಎಡಿಸಿ
ಕುಮಾರಸ್ವಾಮಿ
ಭೂ ಮರುಸ್ಥಾಪನೆ, ಮರುಭೂಮಿಕರಣ ಹಾಗೂ ಬರ ತಡೆಯುವಿಕೆ
ಎಂಬ ಘೋಷವಾಕ್ಯದೊಂದಿಗೆ ಈ ಬಾರಿ ಪರಿಸರ ದಿನಾಚರಣೆ
ಆಚರಿಸಲಾಗುತ್ತಿದೆ ಎಂದು ಪರಿಸರ ಅಧಿಕಾರಿ ಈ ಪ್ರಕಾಶ್
‘ತಿಳಿಸಿದರು.
ಅವರು ಚಿತ್ರದುರ್ಗದಲ್ಲಿ ಪರಿಸರ ದಿನಾಚರಣೆಯಲ್ಲಿ
ಮಾತಾಡಿದರು.
ಅಪರ ಜಿಲ್ಲಾಧಿಕಾರಿ ಬಿ. ಟಿ. ಕುಮಾರಸ್ವಾಮಿ
ಹಾಗೂ ನಗರಸಭೆ ಆಯುಕ್ತ ಎಂ. ರೇಣುಕಾ ಜಾಥ ಕಾರ್ಯಕ್ರಮಕ್ಕೆ
ಹಸಿರು ನಿಶಾನೆ ತೋರುವುದರೊಂದಿಗೆ ಚಾಲನೆ ನೀಡಿದರು.
ಇನ್ನೂ
ಪ್ರತಿ ತಾಲ್ಲೂಕಿನಲ್ಲಿ 10 ಸಾವಿರ ಗಿಡ ನೆಡಲು ಯೋಜನೆ
ರೂಪಿಸಿದೆ
ಅರಣ್ಯನಾಶದಿಂದ ಪರಿಸರದ ಮೇಲೆ ಪ್ರತಿಕೂಲ ಪರಿಣಾಮ
ಉಂಟಾಗುತ್ತಿದೆ.
ಇದನ್ನು ತಡೆಗಟ್ಟಲು ಕಾನೂನು ಸೇವಾ
ಪ್ರಾಧಿಕಾರವು ಅರಣ್ಯ ಇಲಾಖೆ ಸಹಯೋಗದಲ್ಲಿ, ಜಿಲ್ಲೆಯ ಪ್ರತಿ
ತಾಲ್ಲೂಕಿನಲ್ಲಿ 10 ಸಾವಿರ ಗಿಡ ನೆಡಲು ಯೋಜನೆ ರೂಪಿಸಿದೆ
ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಎಂ. ವಿಜಯ್ ಹೇಳಿದರು.
ನಗರದ ಓನಕೆ ಓಬವ್ವ ವೃತ್ತದಲ್ಲಿ ವಿಶ್ವ ಪರಿಸರ ದಿನಾಚರಣೆ
ಅಂಗವಾಗಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತದ
ಸಹಯೋಗದಲ್ಲಿ ಆಯೋಜಿಸಲಾದ ಪರಿಸರ ಜಾಥಕ್ಕೆ ಚಾಲನೆ
ನೀಡಿ ಮಾತಾಡಿದರು.