ಚಳ್ಳಕೆರೆ ನ್ಯೂಸ್ :
ಬಯಲು ಸೀಮೆಯಲ್ಲಿ ಮಳೆರಾಯನ ಆರ್ಭಟಕ್ಕೆ ಹಳ್ಳಕೊಳ್ಳಗಳು ಭರ್ತಿಯಾಗಿ ಜನ ಹೀವನ ಅಸ್ತವ್ಯಸ್ತವಾಗಿದೆ.
ಹೌದು ಕಳೆದ ಹಲವು ದಿನಗಳಿಂದ ಬಿಟ್ಟು ಬಿಡದೆ ಸರಿಯುತ್ತಿರುವ ಮಳೆಗೆ ನಗರದಲ್ಲಿ ಬಿಸಿನೀರು ಮುದ್ದಪ್ಪ ಕ್ರೀಡಾಂಗಣ ಮುಳುಗಿ ಹೋಗಿದೆ.
ಇನ್ನೂ ಚಿತ್ರದುರ್ಗ ರಸ್ತೆಯ ಎಸ್ ಆರ್ ರಸ್ತೆಗೆ ಹೋಗುವ ದಾರಿ ಪಕ್ಕದಲ್ಲಿ ಮಳೆನೀರು ನಿಂತು ಮುಂದೆ ಹೋಗದೆ ದೊಡ್ಡ ಹೊಂಡದಂತೆ ನಿರ್ಮಾಣವಾಗಿದೆ
ಇನ್ನೂ ಪುಟ್ ಬಾತ್ ಮೇಲೆ ಸಾಲು ಸಾಲು ಗೂಡ ಅಂಗಡಿ ಮುಗ್ಗಟ್ಟುಗಳು ಇರುವುದರಿಂದ ಪಾದಚಾರಿಗಳಿಗೆ ಓಡಾಡಲು ತುಂಬಾ ಕಷ್ಟಕರವಾಗಿದೆ.
ಇನ್ನೂ ಆಟೋಗಳ ಹಾವಳಿಯಿಂದ ಖಾಸಗಿ ಬಸ್ ನಿಲ್ದಾಣದಲ್ಲಿ ಸುಮಾರು ಆಟೋಗಳು ಒಂದೇ ಸರಿ, ಬಸ್ ಹಿಂಬಾಲಿಸಿಕೊಂಡು ಹೋಗುವುದರಿಂದ ಪ್ರಯಾಣಿಕರಿಗೆ ಕಿರಿ ಕಿರಿಉಂಟಾಗಿದೆ.
ಏಕಕಾಲದಲ್ಲಿ ನಿಯಮ ಪಾಲಿಸದೆ ಹತ್ತರಿಂದ ಹದಿನೈದು ಆಟೋಗಳು ಆಗಮಿಸಿ ಪ್ರಯಾಣಿಕರಿಗೆ ತೊಂದರೆ ಉಂಟಾಗಿ ಅಪಘಾತಗಳು ಸಂಭವಿಸಿವೆ ಎನ್ನಲಾಗಿದೆ.
ಇನ್ನೂ ಇದಕ್ಕೆ ಕಡಿವಾಣ ಹಾಕಬೇಕಾದ ಪೋಲಿಸ್ ಇಲಾಖೆ ಮಾತ್ರ ಮೌನವಹಿಸಿದೆ ಎಂದು ಪ್ರಯಾಣಿಕರು ಆರೋಪಿಸಿದ್ದಾರೆ.