ಚಳ್ಳಕೆರೆ ನ್ಯೂಸ್ :
ಕೆರೆಗೆ ಹರಿದು ಬರುತ್ತಿರುವ ನೀರು ನೋಡಲು
ಜಮಾಯಿಸಿದ್ದ ಗ್ರಾಮಸ್ಥರು
ಇಂದು ಮಧ್ಯಾಹ್ನ
ಸತತ ಸುರಿದ ಮಳೆಗೆ ತಾಳ್ಯ ಗ್ರಾಮದ ಕೆರೆಗೆ ಬಾರಿ ಪ್ರಮಾಣದಲ್ಲಿ
ನೀರು ಹರಿದು ಬರುತ್ತಿದೆ.
ಹೊಳಲ್ಕೆರೆ ತಾಲ್ಲೂಕಿನಾದ್ಯಂತ ಕಳೆದ ಕೆಲ ದಿನದಳಿಂದ ಸತತ ಮಳೆ ಬೀಳುತ್ತಿದ್ದು, ತಾಳ್ಯ ಗ್ರಾಮದ ಕೆರೆಗೆ ಅಕ್ಕ ಪಕ್ಕದ ಗ್ರಾಮದ ಹಳ್ಳ ಕೊಳ್ಳಗಳ ಮೂಲಕ ಬಾರಿ ಪ್ರಮಾಣದಲ್ಲಿ
ಮಳೆ ನೀರು ಹರಿದು ಬಂದು ಸೇರುತ್ತಿದ್ದು,
ಕೆರೆಗೆ ನೀರು ಹರಿದು
ಬರುವುದನ್ನು ನೋಡಲು ತಾಳ್ಯ ಹಾಗೂ ಸುತ್ತಮುತ್ತಲಿನ
ಗ್ರಾಮಸ್ಥರು ಛತ್ರಿ ಹಿಡಿದು ಕೆರೆ ಬಳಿ ಬಂದು ಜಮಾಯಿಸಿದ್ದರು.