ಚಳ್ಳಕೆರೆ ನ್ಯೂಸ್ :
ಅಪಾಯಕ್ಕೆ ಆಹ್ವಾನ ರಸ್ತೆ ಸಮೀಪ ಪಾಳು ಬಾವಿ
ಚಳ್ಳಕೆರೆ ತಾಲೂಕಿನ ತಿಮ್ಮಪ್ಪಯ್ಯನ ಹಳ್ಳಿ ಸಮೀಪ ರಸ್ತೆ ಪಕ್ಕದಲ್ಲೆ
ಪಾಳು ಬಾವಿಯೊಂದು ಅಪಾಯಕ್ಕೆ ಆಹ್ವಾನ ನೀಡುತ್ತಿದ್ದು
ಅಪಾಯವಾಗುವ ಮುನ್ನ ಸಂಭಂಧಿಸಿದವರು
ಎಚ್ಚೆತ್ತುಕೊಳ್ಳಬೇಕಿದೆ.
ಬಾವಿಯು ರಸ್ತೆ ಸಮೀಪ ಇರುವ ಕಾರಣ
ಇಲ್ಲಿ ವೃದ್ಧರು ಮಕ್ಕಳು ಓಡಾಡುತ್ತಿದ್ದು ಅಪ್ಪಿ ತಪ್ಪಿಯು ಬಾವಿ
ಒಳಗೆ ಬಿದ್ದರೆ ಎದ್ದು ಬರುವುದೇ ಕಷ್ಟ.
ಮೃತ್ಯು ಕೂಪವಾದ
ಬಾವಿಗೆ ತಡೆಗೋಡೆ ಕಟ್ಟಿ ಇಲ್ಲವಾದರೆ ಬಾವಿ ಮುಚ್ಚಿಸಿ ಅಪಾಯ
ತಪ್ಪಿಸಬೇಕಿದೆ ಎಂದು ಸಾರ್ವಜನಿಕರ ಒತ್ತಾಯವಾಗಿದೆ