ಚಳ್ಳಕೆರೆ ನ್ಯೂಸ್ :
ಮೊಳಕಾಲೂರು ತಾಲೂಕಿನ ಹಲವು ಗ್ರಾಮಗಳಿಗೆ ಜಿಲ್ಲಾ
ಪಂಚಾಯಿತಿ ಸಿಇಒ ಎಸ್ ಜೆ ಸೋಮಶೇಖರ್ ಮತ್ತು ಜಿಲ್ಲಾ
ಪಂಚಾಯತಿ ಉಪ ಕಾರ್ಯದರ್ಶಿ ಕೆ ತಿಮ್ಮಪ್ಪ ಭೇಟಿ ನೀಡಿದ್ದಾರೆ.
ತಾಲೂಕಿನ ತಮ್ಮೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ
ಬೊಮ್ಮದೇವರಹಳ್ಳಿಯ ಸರ್ಕಾರಿ ಹಳ್ಳಗಳಲ್ಲಿ ಹೂಳೆತ್ತುವ
ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ನರೇಗಾ ಕೂಲಿಕಾರರ ಜೊತೆ
ನರೇಗಾ ಯೋಜನೆ ಕುರಿತಾಗಿ ಸಾಧಕ ಭಾದಕಗಳ ಬಗ್ಗೆ ಚರ್ಚೆ
ಮಾಡಿದ್ದಾರೆ.
ಈ ಸಂದರ್ಭದಲ್ಲಿ ಗ್ರಾಮಸ್ಥರು ಗ್ರಾಮ ಪಂಚಾಯಿತಿ
ಅಧಿಕಾರಿ ಇದ್ದರು.