ಚಳ್ಳಕೆರೆ ನ್ಯೂಸ್ : ನಮ್ಮ ಜಮೀನುಗಳಲ್ಲಿ ಭದ್ರಾ ಮೇಲ್ದಂಡೆ ಪೈಪ್ ಲೈನ್ಗಳು ಹಾದುಹೋಗಿದ್ದು, ಇದಕ್ಕೆ ಪರಿಹಾರ ನೀಡದೆ ರೈತರ ಹೊಟ್ಟೆಯ ಮೇಲೆ ಬರೆ ಎಳೆಯುತ್ತಿದ್ದಾರೆ ಎಂದು ಹಿರಿಯ ವಕೀಲರಾದ ಶಾಂತಕುಮಾರ್ ಹೇಳಿದರು.
ಅವರು ತಾಲೂಕು ಕಛೇರಿಯಲ್ಲಿ ಶಿರಸ್ತೆದಾರ್ ಗಿರೀಶ್ ಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿದ ಅವರು ಚಳ್ಳಕೆರೆ ತಾಲ್ಲೂಕು, ರಾಮಜೋಗಿಹಳ್ಳಿ, ಕುರುಡಿಹಳ್ಳಿ, ಬಾಲೇನಹಳ್ಳಿ ಹಾಗೂ ಅಕ್ಕಪಕ್ಕದ ಗ್ರಾಮಗಳ ವ್ಯಾಪ್ತಿಯಲ್ಲಿ ಬರುವ ರೈತರ ಜಮೀನುಗಳಲ್ಲಿ ಭದ್ರಾ ಮೇಲ್ದಂಡೆ ಪೈಪ್ ಲೈನ್ ಅಳವಡಿಸಿದ್ದು ಈ ಪೈಪ್ ಲೈನ್ ಗಳ ಕೆಳ¨S್ಫu್ಪ ಮತ್ತು ಅಕ್ಕ-ಪಕ್ಕದಲ್ಲಿ ಸುಮಾರು 20 ಆಡಿಗಳ ಆಳ ಇದ್ದು ಇದರಿಂದ ಆಳದಲ್ಲಿರುವ ಫಲವತ್ತಲ್ಲದ ಮಣ್ಣು ಈ ಜಮೀನುಗಳ ಮೇಲೆ ಬಂದಿದ್ದು ರೈತರಿಗೆ ತುಂಬಾ ನಷ್ಟ ಉಂಟಾಗಿದೆ..
ಇದರಿAದ ಕೂಡ ಬೆಳೆಗಳು ಹಾಳಾಗುತ್ತವೆ. ಹಾಗೂ ಕೆಲವು ರೈತರುಗಳಿಗೆ ಸಂಬAಧಪಟ್ಟ ಇಲಾಖೆಯಿಂದ ಯಾವುದೇ ಮಾಹಿತಿ ಇಲ್ಲದೇ ಇವರುಗಳ ಜಮೀನುಗಳಲ್ಲಿ ಪೈಪ್ ಲೈನ್ ಹಾದುಹೋಗಿರುತ್ತವೆ.
ರೈತರುಗಳಿಗೆ ಬಿತ್ತನೆ ಮಾಡುವುದಕ್ಕೂ ಕೂಡ ಬಾರದ ರೀತಿಯಲ್ಲಿ ಪೈಪ್ ಲೈನ್ ಅಳವಡಿಸಿದ್ದು, ಇದರಿಂದ ನಾವುಗಳು ಉಳುಮೆ ಮಾಡಲೂ ಕೂಡ ಆಗದೇ ನಮ್ಮಗಳಿಗೆ ಬಹಳ ತೊಂದರೆಯಾಗಿದ್ದು ತುಂಬಲಾರದ ನಷ್ಟ ಉಂಟಾಗಿರುತ್ತದೆ.
ರೈತರಾದ ನಾವುಗಳು ಜಮೀನುಗಳಲ್ಲಿ ನೀರು ನಿಲ್ಲಲೆಂದು ವೊಡ್ಡುಗಳನ್ನು ಕಟ್ಟಿಕೊಂಡಿದ್ದು, ಈ ಕಟ್ಟೆಗಳನ್ನು ಹೊಡೆದುಕೊಂಡು ಭದ್ರಾ ಮೇಲ್ದಂಡೆ ಪೈಪ್ ಲೈನ್ ಅಳವಡಿಸಿರುತ್ತಾರೆ. ತುಂಬಾ ಮಳೆ ಬಂದ ತಕ್ಷಣವೇ ಈ ಫಲವತ್ತಾದ ಮಣ್ಣೆಲ್ಲಾ ಕೊಚ್ಚಿ ಹೋಗಿ ಇದರಿಂದ ನೀರು ಶೇಖರಣೆ ಆಗದಂತೆ ಹಾಗೂ ಫಲವತ್ತದೆ ಆಗದೇ ರೈತರುಗಳು ತುಂಬಾ ನಷ್ಟವನ್ನು ಅನುಭವಿಸುವ ಸಂಭವ ಒದಗಿ ಬಂದಿರುತ್ತದೆ.
ತಾವುಗಳು ಖುದ್ದಾಗಿ ಬಂದು ಜಮೀನುಗಳನ್ನು ವೀಕ್ಷಣೆ ಮಾಡಿ ಜಮೀನಿನಲ್ಲಿರುವ ಪೈಪ್ ಲೈನ್ ಅಕ್ಕಪಕ್ಕದಲ್ಲಿ ತುಂಬಿಕೊAಡಿರುವ ಫಲವತ್ತಲ್ಲದ ಮಣ್ಣನ್ನು ತೆಗೆಸಿ ಸಂಬAಧಪಟ್ಟ ಇಲಾಖೆಯಿಂದ ನಮ್ಮಗಳಿಗೆ ನಷ್ಟ ಪರಿಹಾರ ಕೊಡಿಸಿಕೊಡ ಬೇಕೆಂದು ಮನವಿ ಸಲ್ಲಿಸಿದರು.
ಇದೇ ಸಂಧರ್ಭದಲ್ಲಿ ಪಿಎಚ್.ನಾಗೇಶ್, ಎಸ್ ಟಿ.ಶ್ರೀನಿವಾಸನ್, ನಾಗರಾಜ್, ಸಂದೀಪ್, ವೆಂಕಟೇಶ್, ಶಿವಣ್ಣ, ಲಕ್ಷ್ಮಣ್, ಸುರೇಶ್, ಹನುಮಂತ ರೆಡ್ಡಿ, ಸಿದ್ದೇಶ್, ಇತರರು ಪಾಲ್ಗೊಂಡಿದ್ದರು..