ಚಳ್ಳಕೆರೆ ನ್ಯೂಸ್ : ಬೆಳೆ ವಿಮಾ ಕಂಪನಿಗಳು ಅವೈಜ್ಞಾನಿಕ ವಾಗಿ ನಿಯಮಗಳನ್ನು ರೂಪಿಸಿ ರೈತರನ್ನು ವಂಚಿಸುತ್ತಿವೆ ಆದ್ದರಿಂದ ಸೂಕ್ತವಾದ ಮಾನದಂಡದ ಮೂಲಕ ಬೆಳೆವಿಮೆ ಪಾವತಿ ಮಾಡಿದ ತರುವಾಯ ವಿಮೆ ಹಾಕಬೇಕು ಎಂದು ರಾಜ್ಯ ರೈತ ಸಂಘದ ಬೇಡರೆಡ್ಡಿಹಳ್ಳಿ ಬಸವರೆಡ್ಡಿ ಹೇಳಿದರು.
ಅವರು ನಗರದ ತಾಲೂಕು ಕಛೇರಿಗೆ ಸುಮಾರು ರೈತರೊಟ್ಟಿಗೆ ಆಗಮಿಸಿ ತಹಶಿಲ್ದಾರ್ ಗೆ ಮನವಿ ಸಲ್ಲಿಸಿ ಮಾತನಾಡಿದರು
ಪ್ರಪಂಚದಲ್ಲಿ ಪ್ರತಿಯೊಂದಕ್ಕೂ ವಿಮೆ ಪಾವತಿ ಇದೆ ಆದರೆ ಆ ವ್ಯಕ್ತ ಹಾಗೂ ಆ ವಸ್ತು ನಷ್ಟವಾದರೆ ತುರ್ತಾಗಿ ವಿಮೆ ಪಾವತಿ ಹಾಗುತ್ತದೆ. ಆದರೆ ರೈತ ತನ್ನ ಬೆಳೆಗಳಿಗೆ ವಿಮೆ ಮಾಡಿಸಿದರೆ ಹಾನಿಯಾದ ಸಂಧರ್ಭದಲ್ಲಿ ಮಾತ್ರ ನಷ್ಟದ ಪರಿಹಾರ ಮೊತ್ತ ನೀಡುವುದರ ಮೂಲಕ ವಿಮೆ ಮೊತ್ತ ಪಾವತಿಸಬೇಕು
ಆದರೆ ವಿಮೆ ಕಟ್ಟುವಾಗ ಒಂದು ನಿಯಮ ನಷ್ಟವಾದಗ ಇನ್ನೊಂದು ನಿಯಮ ಈಗೇ ರೈತ ನಷ್ಟದಲ್ಲಿ ಸಾಲದ ಸುಳಿಯಲ್ಲಿ ಸಿಲುಕಿ ರೈತ ಆತ್ಮಹತ್ಯೆ ದಾರಿ ಹಿಡಿಯುತ್ತಿದ್ದಾನೆ ಎಂದು ಆಕ್ರೋಶ ಹೊರ ಹಾಕಿದರು.
ಇದೇ ಸಂಧರ್ಭದಲ್ಲಿ ನೂರಾರು ರೈತರು ಈ ಪ್ರತಿಭಟನೆಯಲ್ಲಿ ಬಾಗಿಯಾಗಿದ್ದರು.