ಚಳ್ಳಕೆರೆ ನ್ಯೂಸ್ : ರಾಜ್ಯಾದ್ಯಂತ ಇಂದು ಶಾಲೆಗಳು ಪ್ರಾರಂಭವಾಗಿ ಮಕ್ಕಳು ಸಿಹಿಯೂಟದಿಂದ ಸಂಭ್ರಮದಿAದ ಶಾಲೆಯತ್ತ ದಾವಿಸಿದ್ದಾರೆ.
ಇನ್ನೂ ಮೊದಲ ದಿನವೇ ಮಕ್ಕಳು ಸಂತೋಷದಿAದ, ಸಂಭ್ರಮದಿAದ ನಲಿಯುತ್ತಾ ಶಾಲೆಯತ್ತ ಹೆಜ್ಜೆ ಹಾಕಿದರು.
ಅದರಂತೆ ಚಳ್ಳಕೆರೆ ತಾಲೂಕಿನ ಸುಮಾರು390 ಶಾಲೆಗಳು , ಅನುದಾನ. ಹಾಗೂ ಅನುದಾನ ರಹಿತ ಶಾಲೆಗಳು ಏಕಕಾಲದಲ್ಲಿ ಪ್ರಾರಂಭವಾಗಿ ಶೈಕ್ಷಣಿಕ ವರ್ಷದ ಮೆರಗು ತಂದಿದ್ದಾರೆ.
ಅದರAತೆ 2024-25 ನೇ ಸಾಲಿನ ಶೈಕ್ಷಣಿಕ ವರ್ಷದ ದಾಖಲಾತಿ ಆಂದಲೋನದಲ್ಲಿ ಮಕ್ಕಳು ಹಾಗೂ ಶಿಕ್ಷಕರ ಗ್ರಾಮಗಳಲ್ಲಿ ಆಂದೋಲನದ ಜಾಗೃತಿ ಜಾಥ ಮಾಡುವ ಮೂಲಕ ಪ್ರಾರಂಭವೋತ್ಸವಕ್ಕೆ ಅದ್ದೂರಿ ಚಾಲನೆ ದೊರೆತಿದೆ.
ಶಾಲಾ ಪ್ರಾರಂಭೋತ್ಸವ ಹಾಗೂ ವಿಶೇಷ ದಾಖಲಾತಿ ಆಂದೋಲನ ಕಾರ್ಯಕ್ರಮದ ಮೂಲಕ ಚಳ್ಳಕೆರೆ ತಾಲೂಕಿನ ಬಂಡೆಹಟ್ಟಿ, ನನ್ನಿವಾಳ ಕ್ಲಷ್ಟರ್ ನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಇಂದು ತಳಿರು ತೋರಣಗಳಿಂದ ಶಾಲೆಯನ್ನು ಸಿಂಗರಿಸಿ ಶಾಲಾ ಪ್ರಾರಂಭೋತ್ಸವಕ್ಕೆ ಮೆರಗು ತಂದಿತು.
ಇನ್ನೂ ತಾಲೂಕಿನ ದೊಡ್ಡೆರಿ ಶಾಲೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್.ಸುರೇಶ್ ಬೇಟಿ ನೀಡಿ ಮಕ್ಕಳ ಆಗಮನಕ್ಕೆ ಸ್ವಾಗತ ಕೋರಿ ಶಾಲೆಯ ಮೊದಲ ಶೈಕ್ಷಣಿಕ ವರ್ಷದ ಪ್ರಾರಂಭದ ಶಾಲಾ ದಾಖಲಾತಿ ಆಂದೋಲನ ಜಾಗೃತಿ ಜಾಥಕ್ಕೆ ಚಾಲನೆ ನೀಡಿ ಮಾತನಾಡಿದರು, ತಾಲೂಕಿನ ಸರಕಾರಿ ಶಾಲೆಗಳು ಇಂದು ಪ್ರಾರಂಭವಾಗಿ ಶೈಕ್ಷಣಿಕ ವರ್ಷಕ್ಕೆ ಮುನ್ನುಡಿ ಬರೆದಿವೆ ಅದರಂತೆ ತಾಲೂಕಿನ ಸು.390 ಪ್ರಾಥಮಿಕ ಹಾಗು ಪ್ರೌಢ ಶಾಲೆಗಳು ಪ್ರಾರಂಭವಾಗಿ ಮಕ್ಕಳ ವ್ಯಾಸಂಗಕ್ಕೆ ಪೂರಕವಾಗಿವೆ ಎಂದರು.
ಇನ್ನೂ ಶಾಲೆಯ ಮುಖ್ಯಶಿಕ್ಷಕರಾದ ನಾಗರಾಜ್ ಮಾತನಾಡಿ, ಶಾಲೆಯ ಮೊದಲ ದಿನವೆ ಸಿಹಿಯೂಟದೊಂದಿಗೆ ಶಾಲೆಗೆ ಆಗಮನ ಮಾಡಿಕೊಂಡು ಮಕ್ಕಳಿಗೆ ಉಚಿತ ಪಠ್ಯಪುಸ್ತಕ ಹಾಗೂ ಎರಡು ಜೊತೆ ಉಚಿತ ಸಮವಸ್ತ್ರಗಳನ್ನು ನೀಡಿದೆ ಇನ್ನೂ ಇಂದು ದಾಖಲಾತಿ ಆಂದೋಲನಕ್ಕೆ ಜಾಗೃತಿ ಜಾಥ ಮಾಡಲಾಗಿದೆ ಎಂದರು.
ಇನ್ನೂ ಎಸ್‌ಡಿಎಂಸಿ ಅಧ್ಯಕ್ಷರಾದ ಪಿ.ಗೋವಿಂದರಾಜು, ಗ್ರಾಮ ಪಂಚಾಯಿತಿ ಸದಸ್ಯರಾದ ಗಜಗಡ್ಲೆ ತಿಪ್ಪೇಸ್ವಾಮಿ, ಗೀತಾ, ಪಾಪಯ್ಯ ಅಂಗನವಾಡಿ ಕಾರ್ಯಕರ್ತೆಯಾದ ಪಿ.ಗಿರಿಜಾ, ತಿಪ್ಪೇಸ್ವಾಮಿ ಸಹಾಯಕಿಯಾದ ಮಧುಕಲಾ, ಓ.ರಾಮಯ್ಯ, ಮಾಜಿ ಸದಸ್ಯರಾದ ಓಬಯ್ಯ, ನಾಗರಾಜು, ಜೆ.ತಿಪ್ಪೇಸ್ವಾಮಿ ಹಾಗೂ ಊರಿನ ಮುಖಂಡರು ಉಪಸ್ಥಿತರಿದ್ದರು
ಇನ್ನೂ ಇದೇ ಸಂಧರ್ಭದಲ್ಲಿ ಶಾಲೆಗೆ ಹೊಸದಾಗಿ ಒಂದನೇ ತರಗತಿಗೆ ಮೇಘನ, ಎ.ರಶ್ಮಿತಾ, ಎಂ.ಪ್ರಣತಿ, ಎಂಬ ಮಕ್ಕಳನ್ನು ಸಹ ಇಂದು ದಾಖಲಾತಿ ಮಾಡಿಕೊಳ್ಳಲಾಯಿತು.