ಚಳ್ಳಕೆರೆ ನ್ಯೂಸ್ :
ಗೋವುಗಳು ಹೊಲಗದ್ದೆಗಳಲ್ಲಿ ಮೇಯುವಷ್ಟು ಮಳೆ ಬಿದ್ದಿಲ್ಲ ಆದ್ದರಿಂದ
ಗೋ ಶಾಲೆ ಸ್ಥಗಿತಗೊಳಿಸದಂತೆ ರೈತರು ಮನವಿ ಮಾಡಿದ್ದಾರೆ
ತಾಲೂಕಿನ ಮುತ್ತಿಗಾರಹಳ್ಳಿ ಗೋಶಾಲೆಯನ್ನು ಯಾವುದೇ
ಕಾರಣಕ್ಕು ಸ್ಥಗಿತಗೊಳಿಸದಂತೆ ಪಟ್ಟಣದಲ್ಲಿ ಕರ್ನಾಟಕ ರಾಜ್ಯ
ರೈತ ಸಂಘ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಯಿತು.
ಪ್ರತಿಭಟನೆಯಲ್ಲಿ ಸಂಘಟನೆಯ ತಾಲೂಕು ಅಧ್ಯಕ್ಷರಾದ
ಮರಳಹಳ್ಳಿ ರವಿಕುಮಾರ್ ಮಾತನಾಡಿ,
ತಾಲೂಕಿನಲ್ಲಿ
ಭೀಕರ ಬರಗಾಲ ಎದುರಾಗಿರುವ ಕಾರಣ ಸರ್ಕಾರವು
ಮುತ್ತಿಗಾರಹಳ್ಳಿಯಲ್ಲಿ ಗೋಶಾಲೆಯನ್ನ ತೆರೆದಿತು.
ಆದರೆ ಇದೀಗ
ಗೋಶಾಲೆ ಸ್ಥಗಿತಗೊಳಿಸಲಾಗುತ್ತದೆ ಎಂದು ಕಂದಾಯ ಇಲಾಖೆ ಅಧಿಕಾರಿಗಳು ಮಾಹಿತಿ
ನೀಡಿದ್ದಾರೆ. ಆದ್ದರಿಂದ ಗೋಶಾಲೆ ನಿಲ್ಲಿಸಬೇಡಿ ಎಂದು ಮನವಿ ಮಾಡಿದರು.