ಚಳ್ಳಕೆರೆ ನ್ಯೂಸ್ :

ಅಕ್ರಮ ಮರಳು ಸಾಗಟಕ್ಕೆ ಬ್ರೇಕ್ ಹಾಕಿ ಸರಕಾರದ ಪರವಾನಿಗೆ ಮೂಲಕ ಮರಳು ನೀಡಲು ಜಿಲ್ಲಾಡಳಿತ ಮುಂದಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಹೌದು ಚಳ್ಳಕೆರೆ ತಾಲೂಕಿನಲ್ಲಿ
ಅಕ್ರಮ ಮರಳು ಸಾಗಾಟಕ್ಕೆ ಸಂಪೂರ್ಣವಾಗಿ ಬ್ರೇಕ್ ಹಾಕಿದ ತಾಲೂಕು ಆಡಳಿತ ಹಾಗೂ ಜಿಲ್ಲಾ ಆಡಳಿತ ಮರಳು ದಂಧೆಕೊರರಲ್ಲಿ ನಡುಕ ಉಂಟುಮಾಡಿದೆ.

ಆದರೆ ನಗರದಲ್ಲಿ ಕಟ್ಟಡಗಳು, ಕಾಮಗಾರಿಗಳು ಭರ್ಜರಿಯಾಗಿ ನಡೆಯುತ್ತಾವೆ ಆದರೆ ಅಭಿವೃದ್ಧಿ ಪಥದತ್ತ ಸಾಗಲು ಮರಳು ಪರವಾನಿಗೆ ಅವಶ್ಯಕವಾಗಿದೆ ಎಂದು ಕೆಲವರು ಪರವಾನಿಗೆ ಕೊಡಿ ಎಂದು ತಾಲೂಕು ಕಛೇರಿಗೆ ಅರ್ಜಿ ಸಲ್ಲಿಸಿದರು.

ಇನ್ನೂ ತಹಶಿಲ್ದಾರ್ ರೇಹಾನ್ ಪಾಷರವರು ಅರ್ಜಿಯನ್ನು ಜಿಲ್ಲಾಡಳಿತಕ್ಕೆ ರವಾನಿಸಿ ಉಪವಿಭಾಗಧಿಕಾರಿಗಳ ಗಮನಕ್ಕೆ ತಂದಾಗ ಖುದ್ದಾಗಿ ಸ್ಥಳ ಪರೀಶಿಲನೆ ನಡೆಸಿದ ಉಪವಿಭಾಗಧಿಕಾರಿ ಎಂ.ಕಾರ್ತಿಕ್

ಇಂದು ಚಳ್ಳಕೆರೆ ತಾಲೂಕಿನ
ಚಿಕ್ಕಬಾದಿಹಳ್ಳಿ ಗ್ರಾಮದ ರಿ.ಸಂ. ನಂಬರ್ 5/4 ರಲ್ಲಿ ಮರಳು ನಿಕ್ಷೇಪಕ್ಕೆ ಸಂಬಂಧಿಸಿದಂತೆ ಸ್ಥಳ ತನಿಖೆಯನ್ನು ನಡೆಸಿದರು.

ಇನ್ನೂ ಈ ಕುರಿತು ಉಪವಿಭಾಗಧಿಕಾರಿಗಳ ಎಂ.ಕಾರ್ತಿಕ್ ನಮ್ಮ ಚಳ್ಳಕೆರೆ ಟಿವಿಯೊಂದಿಗೆ ಮಾತನಾಡಿ, ಖಾಸಗಿ ವ್ಯಕ್ತಿಯೊಬ್ಬರು ಮರಳು ಪರವಾನಿಗೆ ನೀಡಲು ತಾಲೂಕು ಕಛೇರಿಗೆ ಅರ್ಜಿ‌ ಸಲ್ಲಿಸಿದರು, ಅದರಂತೆ ಇಂದು ಸ್ಥಳ ಪರೀಶಿಲನೆ‌ ನಡೆಸಿದ್ದೆವೆ, ಮುಂದಿನ ಕ್ರಮ ಕೈಗೊಳ್ಳುತ್ತೆವೆ ಎಂದು ಉತ್ತರಿಸಿದ್ದಾರೆ.

ಇನ್ನೂ ಸ್ಥಳ ತನಿಖೆ ನಡೆಸುವ ಸ್ಥಳಕ್ಕೆ ಆಗಮಿಸುವ ಸಂಧರ್ಭದಲ್ಲಿ ತಮ್ಮ ವಾಹನವು ಮರಳಿನಲ್ಲಿ ಸಿಲುಕಿ ಮತ್ತೆ ಗ್ರಾಮಸ್ಥರ ಸಹಕಾರದಿಂದ ಹೊರಬರಬೇಕಾಯಿತು.

ಇನ್ನೂ ಸ್ಥಳ ಪರೀಶಿಲನೆಯಲ್ಲಿ ತಳಕು ಕಂದಾಯ ನೀರೀಕ್ಷ ತಿಪ್ಪೇಸ್ವಾಮಿ, ಗ್ರಾಮ ಲೆಕ್ಕಾಧಿಕಾರಿಗಳು, ಹಾಗೂ ಇತರ ಅಧಿಕಾರಿಗಳು ಹಾಜರಿದ್ದರು

About The Author

Namma Challakere Local News
error: Content is protected !!