ರಾಜ್ಯದಿಂದ ರಾಜ್ಯಕ್ಕೆ ಬಂದು ಜೀವನ ಸಾಗಿಸುವುದಕ್ಕಾಗಿ ಕಟ್ಟಿಗೆ ಕಡಿದು ಜೀವನ ಸಾಗಿಸುವ ಬಡ ಕೂಲಿ ಕಾರ್ಮಿಕರಿಗೆ ಇಂದು ಶಿಶು ಅಭಿವೃದ್ಧಿ ಇಲಾಖೆ ಹಾಗೂ ಗುಂತಕೋಲಮ್ಮನಹಳ್ಳಿ ಅಂಗನವಾಡಿ ಎ. ಕೇಂದ್ರ ವತಿಯಿಂದ ಆಹಾರ್ ಕಿಟ್ ವಿತರಣೆ ಮಾಡಲಾಗಿದೆ ಎಂದು ಮುಖಂಡ ಎಂ.ಜಯಣ್ಣ ಹೇಳಿದರು.
ಹೋಬಳಿಯ ಗುಂತಕೊಲಮ್ಮನಹಳ್ಳಿ ಗ್ರಾಮದಲ್ಲಿ ಗುರುವಾರ ಆಹಾರ ಕಿಟ್ ವಿತರಣೆ ಮಾಡಿ ಮಾತನಾಡಿ,ಅವರು
ಗ್ರಾಮದ ಸಮೀಪ ಕಟ್ಟಿಗೆ ಕಡಿದು ಇದ್ದಲು ಮಾಡಿ ಜೀವನ ಸಾಗಿಸುತ್ತಿರುವ ಮಹಾರಾಷ್ಟ್ರ ಮೂಲದ 30 ಬಡ ಕೂಲಿಕಾರ್ಮಿಕರಿಗೆ ಇಂದು ಆಹಾರ ಕಿಟ್ ವಿತರಣೆಯನ್ನು ಮಾಡಲಾಗಿದೆ ಇತಂಹ ಕಾರ್ಯವಾಗಬೇಕು ,ಇದ್ದವರು ಇಲ್ಲದವರಿಗೆ ನೀಡಿ ಸಾರ್ಥಕತೆ ಜೀವನ ನಡೆಸಬೇಕು ಎಂದರು.
ಆಹಾರ್ ಕಿಟ್ ವಿತರಣೆ ವೇಳೆ ಗ್ರಾಮಸ್ಥರಾದ ಜೆ ಬಿ ತಿಪ್ಪೇಸ್ವಾಮಿ, ಸಿದ್ದೇಶ್, ರಮೇಶ್, ಶಿವಮ್ಮ, ಅಂಗನವಾಡಿ ಶಿಕ್ಷಕಿರಾದ ಎಸ್ ಪಾಲಮ್ಮ, ಕೆ.ಒ.ಶ್ರೀದೇವಿ, ಸಹಾಯಕಿಯರಾದ. ಅನಿತಮ್ಮ, ಶಾರದಮ್ಮ,
ಮಹಾರಾಷ್ಟ್ರ ಮೂಲದ ಬಡ ಕೂಲಿಕಾರ್ಮಿಕರು ಇದ್ದರು