ಚಳ್ಳಕೆರೆ ನ್ಯೂಸ್ :
ಸ್ವತಃ ಸೂರು ಇಲ್ಲದೆ ಕಳೆದ ಹಲವಾರು ವರ್ಷಗಳಿಂದ ಒಂದೇ ಕಡೆ ವಾಸ ಮಾಡುವ ಕುಟುಂಬಸ್ಥರಿಗೆ ಸಿಹಿ ಸುದ್ದಿ ಸಿಕ್ಕಂತಾಗಿದೆ.
ಹೌದು ಸರಕಾರಿ ಹಾಗೂ ಖಾಸಗಿ ಜಮೀನಿನಲ್ಲಿ ಬಹಳ
ವರ್ಷಗಳಿಂದ ಮನೆಗಳನ್ನು ನಿರ್ಮಿಸಿಕೊಂಡು ವಾಸ ಮಾಡುತ್ತಿದ್ದ
ಪ್ರದೇಶವನ್ನು ಕಂದಾಯ ಗ್ರಾಮಗಳನ್ನಾಗಿ ಆದೇಶ ನೀಡಲಾಗಿದೆ.
ತಹಶಿಲ್ದಾರ್ ರೇಹಾನ್ ಪಾಷ ರವರ ಇತಾಸಕ್ತಿ ಹಾಗೂ ಅವರ ಕಾಳಜಿಗೆ ಇಂದು ಜಿಲ್ಲಾ
ಉಪವಿಭಾಗಾಧಿಕಾರಿ ಎಂ.ಕಾರ್ತಿಕ್ ರವರು ಫಲಾನುಭವುಗಳ ಸಭೆ ನಡೆಸಿ ಕಂದಾಯ ಗ್ರಾಮಗಳನ್ನಾಗಿ ಆದೇಶ ಹೊರಡಿಸಿದ್ದಾರೆ
ಚಳ್ಳಕೆರೆ ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ಕಂದಾಯ ಗ್ರಾಮಗಳ
ಆಯ್ಕೆಯಾಗಳ ಗ್ರಾಮಗಳ ಕಡತಗಳನ್ನು ಪರಿಶೀಲನೆ ನಡೆಸಿ
ಮಾತನಾಡಿದ ಅವರು ಕಳೆದ
ಹತ್ತು ವರ್ಷಗಳಿಂದ ಸರಕಾರಿ ಹಾಗೂ ಖಾಸಗಿ ಜಮೀನುಗಳಲ್ಲಿ ಸುಮಾರು
50 ಕ್ಕೂ ಹೆಚ್ಚು ಮನೆಗಳಿದ್ದರೆ ಕಂದಾಯ
ಗ್ರಾಮ 20 ಕ್ಕೂ ಹೆಚ್ಚು ಮನೆಗಳಿದ್ದರೆ ಉಪ ಗ್ರಾಮ ಎಂದು ಆಯ್ಕೆ ಮಾಡಿ
ವಾಸದ ಮನೆಗಳನ್ವಯ ಅಳತೆ ಮಾಡಿ ಹಕ್ಕು ಪತ್ರ ನೀಡಲಾಗುತ್ತದೆ ಎಂದರು.
.
ಖಾಸಗಿ ಹಾಗೂ ಸರಕಾರಿ ಜಮೀನಿನನಲ್ಲಿ ವಾಸ ಮಾಡುವ
ಕುಟುಂಬಗಳಿಗೆ ಹಕ್ಕು ಪತ್ರಗಳಿಲ್ಲದೆ ಸರಕಾರಿ ಸೌಲಭ್ಯಗಳಿಂದ
ವಂಚಿತರಾಗುತ್ತಿದ್ದರು ಇದನ್ನು ಮನಗಂಡ ಸರಕಾರ ಕಂದಾಯ
ಗ್ರಾಮಗಳನ್ನು ಆಯ್ಕೆ ಮಾಡಿ ಹಕ್ಕು ಪತ್ರಗಳನ್ನು ನೀಡಿ ಗ್ರಾಪಂ ಕಚೇರಿಗೆ
ವಹಿಸಲಾಗುವುದು ಮೂಲಭೂತ ಸೌಲಭ್ಯಗಳಾದ ರಸ್ತೆ, ಚರಂಡಿ, ಬೀದಿ ದೀಪ ಕುಡಿಯುವ ನೀರು ವಸತಿ
ಸೌಲಭ್ಯ ನೀಡಲು ಸಹಕಾರಿಯಾಗಲಿದೆ ಎಂದು ತಹಶೀಲ್ದಾರ್ ರೇಹಾನ್ ಪಾಷ ಹೇಳಿದರು.
ಇದೇ ಸಂಧರ್ಭದಲ್ಲಿ ತಹಶೀಲ್ದಾರ್ ರೇಹಾನ್ ಪಾಷ, ಶಿರಸ್ತೆದಾರ್
ಸದಾಶಿವಪ್ಪ, ಸರ್ವೆ ಇಲಾಖೆ ಎಡಿಎಲ್ ಆರ್ ಬಾಬುರೆಡ್ಡಿ, ಕಂದಾಯ
ನಿರೀಕ್ಷ ಲಿಂಗೇಗೌಡ, ಹಾಗೂ ಗ್ರಾಮ ಲೆಕ್ಕಾಧಿಕಾರಿಗಳು
ಕಂದಾಯ ಗ್ರಾಮಗಳ ಆಯ್ಕೆಯಾದ ಗ್ರಾಮಸ್ಥರು ಉಪಸ್ಥಿತರಿದ್ದರು.