ನಾಯಕನಹಟ್ಟಿ::ಮೇ28. ಸಮೀಪದ ತಿಮ್ಮಪ್ಪಯ್ಯನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ರಾಜಿನಾಮೆಯಿಂದ ತೆರವಾಗಿದ್ದ ಉಪಧ್ಯಾಕ್ಷ ಸ್ಥಾನಕ್ಕೆ ಮಂಗಳವಾರ ನಡೆದ ಚುನಾವಣೆಯಲ್ಲಿ ರಾಮಸಾಗರ ಎಂ. ತಿಪ್ಪೇಸ್ವಾಮಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ, ತಾ ಪಂ ಇಒ ಲಕ್ಷ್ಮಣ್ ಘೋಷಣೆ ಮಾಡಿದ್ದಾರೆ.
ಪಂಚಾಯಿತಿಯ ೧೮ ಸದಸ್ಯರ ಸಂಖ್ಯಾಬಲದಲ್ಲಿ ೧೩ ಜನ ಸದಸ್ಯರು ಹಾಜರಿದ್ದು ಒಮ್ಮತ ಸೂಚಿಸಿದ್ದಾರೆ ಎಂದು ತಿಳಿಸಿದ್ದಾರೆ.
ಉಪಾಧ್ಯಕ್ಷರಾಗಿ ಆಯ್ಕೆಯಾದ ರಾಮಸಾಗರ ಎಂ. ತಿಪ್ಪೇಸ್ವಾಮಿ ಮಾತನಾಡಿ ಗ್ರಾಮ ಪಂಚಾಯತಿ ಎಲ್ಲಾ ಸದಸ್ಯರು ಒಳಗೋಡಿ ಗ್ರಾಮದ ಅಭಿವೃದ್ಧಿಗೆ ಹಾಗೂ ಗ್ರಾಮದ ಮೂಲ ಸೌಕರ್ಯ ಬಗ್ಗೆ ಹೆಚ್ಚಿನ ಆದ್ಯತೆ ನೀಡಲಾಗುವುದು.
ಕುಡಿಯುವ ನೀರು ಗ್ರಾಮದ ಚರಂಡಿ ಸ್ವಚ್ಛತೆ ನಿವೇಶನ ಕುರಿತಂತೆ ಹಲವು ಅಭಿವೃದ್ಧಿ ಕುರಿತಂತೆ ಗಮನ ವಹಿಸುತ್ತೇವೆ ಎಂದರು .
ಗ್ರಾಪಂ ಅಧ್ಯಕ್ಷೆ ಅನಿತಾ ರವಿಕುಮಾರ್, ಸದಸ್ಯರಾದ ಎಸ್. ಪ್ರೇಮಲತಾ, ಬಸಕ್ಕ, ಪಾಲಮ್ಮ, ಲಕ್ಷ್ಮಮ್ಮ, ಗೀತಮ್ಮ, ಶಾಂತಮ್ಮ, ಶೈಲಮ್ಮ, ಕೆ.ತಿಪ್ಪೇಸ್ವಾಮಿ, ಅಶೋಕ್, ಬಂಡೆ ಕಪಿಲೆ ಓಬಣ್ಣ, ಸೋಮಣ್ಣ, ಪಿಡಿಒ ಆರ್. ಶ್ರೀನಿವಾಸ್, ಕಾರ್ಯದರ್ಶಿ ನಾಗರಾಜ, ಆರ್ ಸಂತೋಷ ಮುಖಂಡರಾದ ಜಿ ಪಂ ಮಾಜಿ ಅಧ್ಯಕ್ಷ ಬಾಲರಾಜ್, ಆರ್.ಜಿ. ಜಯಣ್ಣ, ಶಂಕರಮೂರ್ತಿ, ಕರಿಯಣ್ಣ, ಪ್ರಕಾಶ್, ಮಹಾಂತೇಶ್, ಮಹದೇವಣ್ಣ, ಜಿ. ಬಸವರಾಜ್, ಸುರೇಶ್, ಬೋರಣ್ಣ ಮತ್ತಿತರರು ಉಪಸ್ಥಿತರಿದ್ದರು