ಚಳ್ಳಕೆರೆ : ಗ್ರಾಮೀಣ ಪ್ರದೇಶಗಳಲ್ಲಿ ಇತ್ತೀಚಿನ ದಿನಗಳಲ್ಲಿ ಎಗ್ಗಿಲ್ಲದೆ ಕಳ್ಳರ ಹವಾಳಿ ಎಚ್ಚಾಗಿದೆ, ಇಷ್ಟು ದಿನಗಳ ಕಾಲ ಕೇವಲ ಪಂಪ್ ಮೋಟರ್, ವೈರ್ ಕದಿಯುವ ಕಳ್ಳರು ಈಗ ಗೋವುಗಳನ್ನು ಕಡಿಯುವ ಮೂಲಕ ಪೊಲೀಸರಿಗೆ ತಲೆನೋವಾಗಿಸಿದ್ದಾರೆ.
ಇನ್ನೂ ಕಳ್ಳರ ಹವಾಳಿಗೆ ಕಡಿವಾಣ ಹಾಕಲು ದಿನವೀಡಿ ಪೊಲೀಸ್ ಇಲಾಖೆ ಕಳ್ಳರಿಗಾಗಿ ವಿಶೇಷ ತಂಡಗಳನ್ನು ರಚಿಸಿ ಬಲೆ ಬೀಸಿದ್ದಾರೆ.
ಹೌದು ಚಳ್ಳಕೆರೆ ತಾಲೂಕಿನ ತಳಕು ಪೊಲೀಸ್ ಠಾಣಾ ವ್ಯಾಪ್ತಿಗೆ ಬರುವ ಚನ್ನಗಾನಹಳ್ಳಿ ಗ್ರಾಮದ ತೋಟದ ಮನೆಯಲ್ಲಿ ಗೌಡರ ಚೆನ್ನಪ್ಪ ಎಂಬುವವರ ತೋಟದಲ್ಲಿ ಎರಡು ಹಸುಗಳನ್ನು ಕದಿಯಲು ಬಂದ ಕಳ್ಳರಿಗೆ ಚಳ್ಳೆ ಹಣ್ಣು ತಿನಿಸಿದ ಒಂದು ಹಸು ಕಳ್ಳರಿಂದ ತಪ್ಪಿಸಿಕೊಂಡು ಮತ್ತೆ ಮಾಲೀಕನ ಕೊಟ್ಟಿಗೆ ಸೇರಿದೆ,
ಇನ್ನೂ ತೋಟದ ಸಮೀಪ ಕಳ್ಳರು ನಡೆದಾಡುವ ಜಾಡು ಹಿಡಿದ ಮಾಲೀಕ ಪ್ರಕಾಶ್ ಮರುದಿನ ತಳಕು ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾನೆ. ಇನ್ನೂ ಪ್ರಕರಣ ದಾಖಲಿಸಿಕೊಂಡ ಪಿಎಸ್‌ಐ ಅಶ್ವಿನಿ ರವರು ಸ್ಥಳಕ್ಕೆ ಬೇಟಿ ನೀಡಿ ಗೋವುಗಳು ಕಳುವಾಗಿರುವ ಬಗ್ಗೆ ಮಾಹಿತಿ ಪಡೆದು ತನಿಖೆ ಕೈಗೊಂಡಿದ್ದಾರೆ.