ರಜೆಯಲ್ಲಿದ್ದ ಮಕ್ಕಳು ಶಾಲೆಯತ್ತ ದಾವಿಸಲು ಶಿಕ್ಷಣ ಇಲಾಖೆಯ ಉಪಾಯ ಸಿಹಿಯೂಟ
ರಾಮಾಂಜನೇಯ ಕೆ.ಚನ್ನಗಾನಹಳ್ಳಿ
ಚಳ್ಳಕೆರೆ : ಕಳೆದ ಒಂದು ತಿಂಗಳಿAದ ಆರಾಮಗಿ ಅಜ್ಜಿ ಮನೆಯಲ್ಲಿ ಕಾಳೆ ಕಳೆದ ಮಕ್ಕಳು ಇಂದು ಶಾಲೆಗೆ ಖುಷಿಯಾಗಿ ಮರುಕಳಿಸಲು ಶಿಕ್ಷಣ ಇಲಾಖೆ ಹಲವು ಕ್ರಮಗಳನ್ನು ಕೈಗೊಂಡಿದೆ.
ಹೌದು ಮೇ.31 ರಂದು ರಾಜ್ಯಾದ್ಯಾಂತ ಪ್ರಾರಂಭಗೊಳ್ಳುವ ಶಾಲೆಗಳು 2024-25ನೇ ಸಾಲಿನ ಶೈಕ್ಷಣಿಕ ವರ್ಷ ಪ್ರಾರಂಭೋತ್ಸವಕ್ಕೆ ಶಿಕ್ಷಣ ಇಲಾಖೆ ಸಿಹಿಯೂಟದಿಂದ ಪ್ರಾರಂಭಿಸಿದೆ. ಅದರಂತೆ ಇಂದು ಮೇ.29ರಂದು ಮುಖ್ಯ ಶಿಕ್ಷಕರು ಶಾಲಾ ಸಿದ್ದತೆಗೆ ಕ್ರಮವಹಿಸಲಾಗಿದೆ.
ಬಯಲು ಸೀಮೆ ಚಳ್ಳಕೆರೆ ತಾಲೂಕಿನಲ್ಲಿ ಬುಡಕಟ್ಟು ಜನಾಂಗವೇ ಹೆಚ್ಚು ವಾಸಮಾಡುವ ತಾಲೂಕಿನಲ್ಲಿ ಸುಮಾರು 360ಸರಕಾರಿ ಪ್ರಾಥಮಿಕ ಶಾಲೆಗಳು, 23 ಸರಕಾರಿ ಪ್ರೌಢಶಾಲೆಗಳು ಹಾಗೂ 7 ವಸತಿ ಶಿಕ್ಷಣ ಸಂಸ್ಥೆಗಳು ಹಾಗೂ ಖಾಸಗಿ ಅನುದಾನ ರಹಿತ ಹಾಗೂ ಸಹಿತ ಶಾಲೆಗಳು ಇಂದಿನಿAದ ಪ್ರಾರಂಭಗೊAಡಿವೆ.
ಅದರAತೆ ಮೇ.31ರಂದು ರಾಜ್ಯಾದ್ಯಾಂತ ಪ್ರಾರಂಭಗೊಳ್ಳುವ ಶಾಲೆಗಳು, ಚಳ್ಳಕೆರೆ ತಾಲೂಕಿನಲ್ಲಿ ಸುಮಾರು 53,302 ಮಕ್ಕಳು ಪ್ರಸಕ್ತ ಸಾಲಿನಲ್ಲಿ ಇದ್ದಾರೆ, ಅದರಂತೆ ಸರಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆ ಹಾಗೂ ವಸತಿ ಶಾಲೆಗಳು, ಅನುದಾನ, ರಹಿತ ಒಟ್ಟು ಶಾಲೆಗಳು ಏಕಕಾಲಕ್ಕೆ ಪ್ರಾರಂಭಗೊಳ್ಳುವ ಮೂಲಕ ಶೈಕ್ಷಣಿಕ ಆರಂಭಕ್ಕೆ ಮುನ್ನುಡಿ ಬರೆಯಲಿವೆ.
ಈಗಾಗಲೇ ತಾಲೂಕಿನಲ್ಲಿ ಎಲ್ಲಾ ಶಾಲೆಗಳಲ್ಲಿ ಶಿಕ್ಷಕರು ಬೀಡು ಬಿಟ್ಟಿದ್ದು ಶಾಲಾ ಆವರಣ ಸ್ವಚ್ಚತೆ, ಶೌಚಾಲಯ ಹಾಗೂ ಕುಡಿಯುವ ನೀರು ಈಗೇ ಎಲ್ಲಾವನ್ನು ಗಮನಹರಿಸಿ, ಶಾಲಾ ಕಟ್ಟಡಕ್ಕೆ ಸುಣ್ಣಬಣ್ಣ, ಗೋಡೆ ಬರಹದ ಮೂಲಕ ಬಿತ್ತಿ ಚಿತ್ರಹಗಳನ್ನು ಬರೆದು, ತಳಿರು ತೋರಣಗಳಿಂದ ಮಕ್ಕಳ ಬರುವಿಕೆಗೆ ಶಾಲೆಗಳು ಕಂಗೋಳಿಸುತ್ತಿವೆ.
ಶಾಲಾ ಪ್ರಾರಂಭದ ದಿನವೇ ಪಠ್ಯ ಪುಸ್ತಕ ವಿತರಣೆ :
ಮಕ್ಕಳು ಇಷ್ಟು ದಿನಗಳ ಕಾಲ ರಜೆಯಲ್ಲಿ ಇದ್ದ, ಅವರು ತಮ್ಮ ಶೈಕ್ಷಣಿಕ ಶಾಲಾ ಪಠ್ಯಕ್ಕೆ ಮಕ್ಕಳನ್ನು ಹೊಂದಿಸಿಕೊಳ್ಳಲು ಮೊದಲ ದಿನವೇ ಪಠ್ಯ ಪುಸ್ತಕ ಹಾಗೂ ಎರಡು ಜೊತೆ ಸಮಸ್ತçಗಳನ್ನು ವಿತರಿಸಲು ಈಗಾಗಲೇ ಮುಖ್ಯ ಶಿಕ್ಷಕರಿಗೆ ಸೂಚಿಸಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್.ಸುರೇಶ್ ಹೇಳುತ್ತಾರೆ.
ಶಿಕ್ಷಣ ಸಚಿವರ ಘೋಷವಾಕ್ಯ :
ಪ್ರಸ್ತುತ ರಾಜ್ಯ ಸರಕಾರದ ಸಚಿವರ ಈ ವರ್ಷದ ಘೋಷವಾಕ್ಯ “ನಮ್ಮಶಾಲೆ ನಮ್ಮಜವಾಬ್ದಾರಿ” ಎಂಬುದು ಈ ಬಾರಿಯ ಹೇಳಿಕೆಯಾಗಿದೆ, ಈ ವಾಖ್ಯದ ಉದ್ದೇಶ ಪ್ರತಿಯೊಬ್ಬ ವಿದ್ಯಾರ್ಥಿಯು ತಾವು ಓದಿದ ಶಾಲೆಯ ಬಗ್ಗೆ ಕಾಳಜಿ ತಾಳಬೇಕು, ಇನ್ನೂ ಓದಿದ ಶಾಲೆಯ ಋಣ ತಿರಿಸಬೇಕು. ಆದ್ದರಿಂದ ಪ್ರಸ್ತುತ ವರ್ಷದಲ್ಲಿ ಶಾಲೆಯಲ್ಲಿ ಓದಿದ ಹಳೆಯ ವಿದ್ಯಾರ್ಥಿಗಳ ವಾಟ್ಸ್ಪ್ ಗ್ರೂಪ್ ರಚಿಸಿ ಶಾಲೆಯ ಅಭಿವೃದ್ದಿಗೆ ಕಟಿಬದ್ದರಾಗಬೇಕು ಎಂಬ ಉದ್ದೇಶವಾಗಿದೆ.
ಮಕ್ಕಳನ್ನು ಸೆಳೆಯಲು ಶಿಕ್ಷಣ ಇಲಾಖೆ ಕ್ರಮ :
ಈಗಾಗಲೇ ಮನೆಯಲ್ಲಿ ರಜಾ ದಿನಗಳನ್ನು ಕಳೆದ ಮಕ್ಕಳಿಗೆ ವಿಶೇಷವಾಗಿ ಶಾಲೆಗೆ ಭರಮಾಡಿಕೊಳ್ಳುವ ಮೂಲಕ ಸಿಹಿಊಟ ನೀಡಿ ಅವರಿಗೆ ಕೆನೆಭರಿತ ಹಾಲು ನೀಡಿ, ಹಾಗೂ ರಾಗಿ ಮಾಲ್ಟ್, ಬಾಳೆಹಣ್ಣು, ಮೊಟ್ಟೆ, ಚುಕ್ಕಿ, ಈಗೇ ಆಹಾರ ಧಾನ್ಯಗಳ ಮೂಲಕ ಪೋಷ್ಠಿಕ ಆಹಾರ ತಯಾರಿಸಿಕೊಡುವುದು ಈಗೇ ವಿಶೇಷವಾಗಿ ಮಕ್ಕಳ ಗಮನ ಸೇಳೆಯುದಕ್ಕೆ ಶಿಕ್ಷಣ ಇಲಾಖೆ ಸನ್ನದು ಹಾಗಿದೆ.
ಬಾಕ್ಸ್ ಮಾಡಿ :
ತಾಲೂಕಿನಲ್ಲಿ ಸು.360 ಸರಕಾರಿ ಪ್ರಾಥಮಿಕ ಶಾಲೆಗಳು ಹಾಗೂ 23 ಪ್ರೌಢಶಾಲೆಗಳು 7ವಸತಿ ಶಾಲೆಗಳ ಮುಖ್ಯ ಶಿಕ್ಷಕರಿಗೆ ಈಗಾಗಲೇ ಮೂರು ಬಾರಿ ಸಭೆ ಮಾಡಿ, ಶೇ.76ರಷ್ಟು ಪಠ್ಯ ಪುಸ್ತಕಗಳನ್ನು ಹಾಗೂ ಎರಡು ಜೊತೆ ಸಮವಸ್ತಗಳನ್ನು ಶಾಲೆಗಳಿಗೆ ಸರಬರಾಜು ಮಾಡಲಾಗಿದೆ, ಮೇ.31ರಂದು ಮಕ್ಕಳನ್ನು ಸೆಳೆಯಲು ವಿಶೇಷವಾಗಿ ಶಾಲೆಯಲ್ಲಿ ತಳಿರು ತೋರಣಗಳಿಂದ ಸಿಂಗರಿಸಿ ಸಿಹಿಯೂಟ ನೀಡಿ, ಅವರಿಗೆ ಆಟದ ಮೂಲಕ ಒಂದು ದಿನ ಮಕ್ಕಳನ್ನು ಸೇಳೆಯುವ ಮೂಲಕ ಈಗಾಗಲೇ ಶಿಕ್ಷಣ ಇಲಾಖೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.—
ಕೆ.ಎಸ್.ಸುರೇಶ್, ಕ್ಷೇತ್ರ ಶಿಕ್ಷಣಾಧಿಕಾರಿಗಳು ಚಳ್ಳಕೆರೆ
ಪೋಟೋ 1. ಚಳ್ಳಕೆರೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯಲ್ಲಿ ಮುಖ್ಯ ಶಿಕ್ಷಕರು ಪಠ್ಯ ಪುಸ್ತಕಗನ್ನು ಶಾಲೆಗೆ ಕೊಂಡುಯ್ಯುತ್ತಿರುವುದು
ಪೋಟೋ 2. ಚಳ್ಳಕೆರೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯಲ್ಲಿ ಮುಖ್ಯ ಶಿಕ್ಷಕರು ಸಮವಸ್ತçಗಳನ್ನು ಶಾಲೆಗೆ ಕೊಂಡುಯ್ಯುತ್ತಿರುವುದು.
ಪೋಟೋ 3. ಚಳ್ಳಕೆರೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್.ಸುರೇಶ್