ಚಳ್ಳಕೆರೆ ನ್ಯೂಸ್ :
ಶಾಲಾ ಕಟ್ಟಡ ನಿರ್ಮಾಣದಲ್ಲಿ ಕಳಪೆ ಕಾಮಗಾರಿ ಆಕ್ರೋಶ ಹೊರ
ಹಾಕಿದ ಗ್ರಾಮಸ್ಥರು
ಹೊಳಲ್ಕೆರೆ ತಾಲೂಕಿನ ಚಿತ್ರಹಳ್ಳಿಯ, ಗೌರಿ ಪುರದಲ್ಲಿ ನಿರ್ಮಿಸುತ್ತಿರುವ,
ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ, ಹೆಚ್ಚುವರಿ ಶಾಲಾ ಕೊಠಡಿ
ಕಾಮಗಾರಿ, ಕಳಪೆಯಾಗಿದೆ ಎಂದು ಗ್ರಾಮಸ್ಥರು ಆರೋಪಿಸಿ
ಆಕ್ರೋಶ ಹೊರ ಹಾಕಿದ್ದಾರೆ.
ಕಳೆದ 3 ವರ್ಷಗಳಿಂದ ನಿರ್ಮಾಣ
ಮಾಡುತ್ತಿರುವ, ಕಟ್ಟಡಕ್ಕೆ ಶನಿವಾರ ಆರ್ ಸಿಸಿ ಹಾಕಿದ್ದು, ಇಂದು
ಕೀಳಲು ಬಂದಿದ್ದಾರೆ.
ಒಂದು ದಿನವೂ ಕಟ್ಟಡದ ಕ್ಯೂರಿಂಗ್
ಮಾಡಿಲ್ಲ. ಕಳಪೆ ಕಾಮಗಾರಿ ತಡೆದು ತಪ್ಪಿತಸ್ಥರ ವಿರುದ್ಧ ಕ್ರಮ
ತೆಗೆದುಕೊಳ್ಳಲು ಗ್ರಾಮಸ್ಥರು ಒತ್ತಾಯಿಸಿದ್ದಾರೆ.