ರಾಮಾಂಜನೇಯ.ಕೆ ಚನ್ನಗಾನಹಳ್ಳಿ
ಚಳ್ಳಕೆರೆ: ಬರದ ನಾಡಿನಲ್ಲೂ ಅರಣ್ಯಿಕರಣ ಮಾಡುವುದು ಒಂದು ಸವಾಲೆ ಸರಿ. ಆದರೆ ಇಲ್ಲಿನ ಅರಣ್ಯ ಇಲಾಖೆ ಅಧಿಕಾರಿಗಳ ಇತಾಸಕ್ತಿಯಿಂದ ನಿರಂತರವಾಗಿ ಗಿಡಗಳ ಬೆಳೆಸುವಿಕೆ ರೈತರಿಗೆ ನೀಡುವುದು ವಾಡಿಕೆಯಾಗಿದೆ. ಬಯಲು ಸೀಮೆ ಎಂದರೆ ಎಂಥವರಿಗೂ ನೆನಪಾಗುವುದು ಚಳ್ಳಕೆರೆ ತಾಲ್ಲೂಕು ಇಲ್ಲಿ ಕ್ಷಣಕ್ಷಣಕ್ಕೂ ಬಿಸಿಲ ಧಗೆಯು ಕಾವು ಹೆಚ್ಚಿ ಇದರ ಜಳ ಪ್ರಾಣಿ ಸಂಕುಲಕ್ಕೆ ಬಡಿಯದೆ ಇರದು,
ಆದ್ದರಿಂದ ಈ ಬಾರಿ ಸಾಮಾಜಿಕ ಅರಣ್ಯ ಪ್ರದೇಶ ಹಾಗೂ ಪ್ರಾದೇಶಿಕ ಅರಣ್ಯ ಪ್ರದೇಶದಿಂದ ಸುಮಾರು ಲಕ್ಷÀಕ್ಕಿಂತ ಅಧಿಕ ಗಿಡಗಳನ್ನು ನೆಡುವ ಗುರಿ ಹೊಂದಿದ್ದಾರೆ, ರೈತರಿಗೆ ಕೃಷಿ ಅರಣ್ಯ ಪ್ರೋತ್ಸಹ ಯೋಜನೆಯಡಿಯಲ್ಲಿ ಗಿಡಗಳನ್ನು ನೀಡಲಾಗುತ್ತಿದೆ, ಮತ್ತು ಶಾಲಾ ಕಾಲೇಜು, ಸಂಘ ಸಂಸ್ಥೆಗಳಿಗೆ ವಿತರಣೆ ಮಾಡಲಾಗುತ್ತದೆ.
ಇನ್ನೂ ಪ್ರಸಕ್ತ ಸಾಲು 2024-25 ನೇ ಸಾಲಿಗೆ ಆರ್.ಎಸ್.ಪಿ.ಡಿ/ ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆಯಡಿಯಲ್ಲಿ ಮಹಾಘನಿ, ಕರಿಬೇವು, ಹಲಸು, ಸಿಲ್ವಾರ್ ಓಕ್, ನಿಂಬೆ, ಸರ್ವೆ, ಕಾಡುಬಾದಮಿ, ಸಂಪಿಗೆ, ಶ್ರೀಗಂಧ, ನೇರಳೆ, ತೇಗ, ರಕ್ತ ಚಂದನÀ ಸಸಿಗಳನ್ನು ಸುಮಾರು 19000 ಸಸಿಗಳು ಹಾಗೂ 25000 ಸಸಿಗಳನ್ನು ಸಾರ್ವಜನಿಕರಿಗೆ ರಿಯಾಯಿತಿ ದರಗಳಲ್ಲಿ ಪ್ರತಿ ಸಸಿಗೆ ರೂ.6/- ಹಾಗೂ ಚಿಕ್ಕ ಬ್ಯಾಗಿನ ಪ್ರತಿ ಸಸಿಗೆ ರೂ.3/- ರಂತೆ ಕಛೇರಿಯಲ್ಲಿ ಪಾವತಿಸಿ ಕೃಷಿ ಅರಣ್ಯ ಪ್ರತ್ಸಾಹ ಯೋಜನೆಯಡಿಯಲ್ಲಿ ನೊಂದಣಿ ಶುಲ್ಕ ರೂ.10/-ಪಾವತಿಸಿ ಸಸಿಗಳನ್ನು ಪಡೆದು ಕೊಂಡಲ್ಲಿ ನಂತರದ ಬದುಕುಳಿದ ಪ್ರತಿ ಸಸಿಗೆ ಮೊದಲನೆ ವರ್ಷದಲ್ಲಿ ರೂ.35/- ಎರಡನೇ ವರ್ಷದಲ್ಲಿ ರೂ. 40/-ಮೂರನೇ ವರ್ಷದಲ್ಲಿ ರೂ.50/-ಪ್ರೋತ್ಸಾಹ ದನ ವಿತರಿಸಲಾಗುತ್ತದೆ.

2024-25 ನೇ ಸಾಲಿನ ಆರ್ಥಿಕ ಗುರಿಯಂತೆ 6.00 ಕಿ.ಮೀ ರಸೆ್ತಬದಿ ನಡುತೋಪು, 05.00 ಹೆಕ್ಟೇರ್ ನಗರ ಹಸಿರೀಕರಣಕ್ಕೆ ನೆಡುತೋಪು, 87.70 ಹೆಕ್ಟೇರ್ ಬ್ಲಾಕ್ ನೆಡುತೋಪು ನಿರ್ಮಾಣ ಮಾಡುತ್ತಿದ್ದು ಇದಕ್ಕೆ ಮರಾಲೆ, ಬಸರಿ, ಬಾಗೆ, ಬಂಬು ನೇರಳೆ, ಹೊಂಗೆ, ಚಳ್ಳೆ, ಗೋಣಿ, ಹಲಸು, ಆಲ, ಅರಳಿ, ಬೇವು, ಶಿವನೆ ಅತ್ತಿ. ತಾರೆ, ಬೀಟೆ ಇನ್ನಿತರೆ ಜಾತಿಯ 27000 ಸಸಿಗಳನ್ನು ಈಗಾಗಳೇ ತೆಗೆದ ಗುಂಡಿಗಳಲ್ಲಿ ನಾಟಿ ಮಾಡಲಾಗುತ್ತಿದೆ.
ವಿಶ್ವಪರಿಸರ ದಿನಾಚರಣೆ ಅಂಗವಾಗಿ ನಡೆಸು ಕಾರ್ಯಕ್ರಮಗಳಿಗೆ 500 ತಪಸಿ, ಬೀಟೆ, ತಾರೆ, ಬಂAಬು ನೇರಳೆ ಸಸಿಗಳನ್ನು ಬೆಳೆಸಲಾಗಿರುತ್ತದೆ ಎಂದು ವಿಶ್ವವಾಣಿಯೊಂದಿಗೆ ಪ್ರಾದೇಶಿಕ ವಲಯ ಅರಣ್ಯ ಅಧಿಕಾರಿ ಬಹುಗುಣ ಮಾಹಿತಿ ಹಂಚಿಕೊAಡಿದ್ದಾರೆ.
ಪ್ರೋತ್ಸವ ಧನ :
ಗಿಡಗಳನ್ನು ಪೋಷಣೆ ಮಾಡಲು ಮೂರು ವರ್ಷಗಳ ಪ್ರೋತ್ಸಹ ಧನವನ್ನು ರೈತರ ಬ್ಯಾಂಕ್ ಖಾತೆಗೆ ನೇರವಾಗಿ ಹಾಕಲಾಗುವುದು, ಕೆಎಂ.ಇ.ಆರ್.ಸಿ ಯೋಜನೆಯ ಅಡಿಯಲ್ಲಿ ಓಬಳಾಪುರ ಕಾಯ್ದಿಟ್ಟ ಅರಣ್ಯಕ್ಕೆ ಸಂಬAಧಿಸಿದAತೆ 5000ಶ್ರೀಗಂಧದ ಸಸಿಗಳನ್ನು ಬೆಳೆಸಲಾಗಿದ್ದು, ಈ ಸಸಿಗಳನ್ನು ಓಬಳಾಪುರ, ಕಾಟಂದೇವರಕೋಟೆ, ದೊಣ್ಣೆಹಳ್ಳಿ, ರೇಣುಕಾಪುರ ಗ್ರಾಮಗಳ gÊÉತರಿಗೆ ಪ್ರತಿ ಸಸಿಗೆ ರೂ.6/-ರಂತೆ ಕೃಷಿ ಅರಣ್ಯ ಪ್ರತ್ಸಾಹ ಯೋಜನೆಯಡಿಯಲ್ಲಿ ನೊಂದಣಿ ಶುಲ್ಕ ರೂ.10/- ಪಾವತಿಸಿ ಸಸಿಗಳನ್ನು ಪಡೆದುಕೊಂಡಲ್ಲಿ ತದ ನಂತರದ ಬದುಕುಳಿದ ಪ್ರತಿ ಸಸಿಗೆ ಮೊದಲನೆ ವರ್ಷದಲ್ಲಿ ರೂ.35/-ಎರಡನೇ ವರ್ಷದಲ್ಲಿ ರೂ.40/-ಮೂರನೇ ವರ್ಷದಲ್ಲಿ ರೂ.50/-ಪ್ರೋತ್ಸಾಹ ದನ ವಿತರಿಸಲಾಗುತ್ತದೆ. ಇದರಿಂದ ಹೆಚ್ಚಿನ ಸಂಖ್ಯೆಯಲ್ಲಿ ರೈತರು ತಮ್ಮ ಜಮೀನಿನ ಬದು ಹಾಗೂ ಪಾಳು ಭೂಮಿಯಲ್ಲಿ ಗಿಡಗಳನ್ನು ನೆಡಲು ಮುಂದಾಗಬೇಕಿದೆ.
ಕಳೆದ ಸಾಲಿನಲ್ಲಿ ಅರಣ್ಯ ಇಲಾಕೆಯಿಂದ ಬೃಹತ್ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಂಡು, ಶಾಲೆ-ಕಾಲೇಜು, ಸರಕಾರಿ ಕಚೇರಿ, ಗ್ರಾಪಂ ಆವರಣ, ಸಾರಿಗೆ ಘಟಕ, ರಸ್ತೆ ಬದಿ ಸೇರಿದಂತೆ ಅರಣ್ಯ ಪ್ರದೇಶದಲ್ಲಿ ಸಾವಿರಾರು ಸಸಿಗಳನ್ನು ಹಾಕಲಾಗಿತ್ತು. ಈ ಬಾರಿ ಸಂಘ, ಸಂಸ್ಥೆಗಳು, ಸಾರ್ವಜನಿಕರಿಗೂ ನೀಡಲಾಗಿತ್ತು, ಬೇವು, ಕಾಡು ಬಾದಾಮಿ, ಅರಳಿ, ನೇರಳೆ, ಅಕೇಶಿಯ, ಸಂಪಿಗೆ, ಹಲಾ, ಹೊಂಗೆ, ತೇಗಾ, ಸಿಲ್ವಾರ್ ಹಲವಾರು ಜಾತಿಯ ಗಿಡಗಳನ್ನು ಬೆಳೆಸಿ ಶಾಲೆ, ಕಾಲೇಜು, ಸಂಘ, ಸಂಸ್ಥೆಗಳ, ರೈತರಿಗೆ ನೀಡಿದ ನಂತರ ಉಳಿಯುವ ಲಕ್ಷಾಂತರ ಸಸಿಗಳನ್ನು ಅರಣ್ಯ ಇಲಾಖೆ ನೆಡುತೋಪುಗಳಲ್ಲಿ ನೆಡಲಾಗಿತ್ತು ಎಂಬ ಮಾಹಿತಿಯನ್ನು ನಿತಿನ್ ಸಾಮಾಜಿಕ ವಲಯ ಅರಣ್ಯಾಧಿಕಾರಿ ಮೆಲಕು ಹಾಕಿದರು.
ಬಾಕ್ಸ್ ಮಾಡಿ:
ಸಸಿ ಬೆಳೆಸುವ ಅಸಕ್ತರಿಗೆ ಹಾಗೂ ಎಲ್ಲಾ ರೈತರಿಗೆ ಇಲಾಖೆಯಿಂದ ಸಸಿಗಳನ್ನು ಹಾಕಲು ಮತ್ತು ಬೆಳೆಸಲು ಪ್ರೋತ್ಸಹ ದನ ನೀಡುತ್ತಿದ್ದು ಎಲ್ಲಾರೂ ಪ್ರೋತ್ಸಹದನದಲ್ಲಿ ಸಸಿಗಳನ್ನು ಪಡೆದು ಬೆಳೆಸಿದರೆ ಬೆಳೆದ ನಂತರ ನಿಮ್ಮ ಖಾತೆಗೆ ಹಣವು ಬರುತ್ತೆ ಪರಿಸರ ಕಾಳಜಿಯೂ ಇದ್ದಂತಾಗುತ್ತದೆ, ಹಾಗೂ ಎಲ್ಲಾ ಶಾಲಾ ಕಾಲೇಜುಗಳಲ್ಲಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಹಾಕಲು ಸೂಚಿಸಿದ್ದು ರಸ್ತೆ ಬದಿ, ಹಾಗೂ ಶಾಲಾ ಆವರಣದಲ್ಲಿ ಬೆಳೆಸಲು ತಿಳಿಸಿದೆ.- ಬಹುಗುಣ, ಪ್ರಾದೇಶಿಕ ವಲಯ ಅರಣ್ಯ ಅಧಿಕಾರಿಗಳು

ಬಾಕ್ಸ್ ಮಾಡಿ :
ಬಂಜರು ಭೂಮಿಯನ್ನು ಹಸಿರುಕರಣ ಮಾಡಲು ಪ್ರತಿಯೊಬ್ಬರು ಪಣತೊಡಬೇಕು ಅದರಂತೆ ಅಧಿಕಾರಿಗಳ ಸಹಕಾರ ಪಡೆದು ಸಸಿಗಳನ್ನು ಪಡೆದು ಪ್ರತಿಯೊಬ್ಬರು ಮನೆಗೊಂದು ಮರ ಊರಿಗೊಂದು ವನ ಎಂಬ ಧ್ಯೋಯವಾಖ್ಯದೊಂದಿಗೆ ಕಂಕಣ ಬದ್ದರಾಗಬೇಕು, ಈಗಾಗಲೇ ಆಳುವವರ ಕೈಗೆ ಸಿಕ್ಕಿ ರೈತರು ನಲುಗುತಿದ್ದಾರೆ ಉಳಿದ ಭೂಮಿಯನ್ನಾದರೂ ರಕ್ಷಿಸಿಕೊಳ್ಳಬೇಕಾದ ಅನಿವಾರ್ಯವಿದೆ. –
ರೆಡ್ಡಿಹಳ್ಳಿವೀರಣ್ಣ ರಾಜ್ಯ ಉಪಾಧ್ಯಕ್ಷರು, ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ

ಚಳ್ಳಕೆರೆ ಸುತ್ತಲೂ ಈಗಾಗಲೆ ಸುಮಾರು ಸಾವಿರಾರು ಎಕರೆ ಪರಿಸರದ ಜಾಗವನ್ನು, ಖಾಸಗಿ ಸಂಸ್ಥೆಗಳು ಆಕ್ರಮಿಸಿಕೊಂಡು ಇಂದು ತಾಲೂಕು ಬರಡು ಭೂಮಿಯ ತಾಲೂಕು ಬಂಜರು ಭೂಮಿಯಾಗುವ ಸಾಧ್ಯತೆಗಳು ಇದ್ದು, ಸಂಕಷ್ಠಕ್ಕೆ ಸಿಲುಕುವ ಪರಿಸ್ಥಿತಿ ಬಂದಿದೆ. ಆದ್ದರಿಂದ ಇರುವ ಖಾಲಿ ಪ್ರದೇಶದಲ್ಲಿ ಗಿಡಗಳ್ನು ಬೆಳೆಸಿಕೊಳ್ಳಬೇಕು.
ದಯಾನಂದ ಮೂರ್ತಿ ಪ್ರಗತಿರ ರೈತ.

ಫೋಟೊ,1. ಚಳ್ಳಕೆರೆಯ ಸಸ್ಯಕ್ಷೇತ್ರದಲ್ಲಿ ಬೇವು, ಕಾಡು ಬಾದಾಮಿ, ಅರಳಿ, ನೇರಳೆ, ಅಕೇಶಿಯ, ಸಂಪಿಗೆ,ಅಲ, ಹೊಂಗೆ, ತೇಗಾ, ಸಿಲ್ವಾರ್ ಹಲವಾರು ಜಾತಿಯ ಗಿಡಗಳನ್ನು ಬೆಳೆಸಿರುವುದು.

Namma Challakere Local News

You missed

error: Content is protected !!