ಚಳ್ಳಕೆರೆ ನ್ಯೂಸ್ :
ಜವನಗೊಂಡನಹಳ್ಳಿ ಬಂದ್ ಗೆ ರೈತ ಸಭೆಯಲ್ಲಿ ಮೂಡಿ
ಬಂದ ಒಮ್ಮತದ ತೀರ್ಮಾನ
ಜವನಗೊಂಡನಹಳ್ಳಿಯ ಹೋಬಳಿಯ, ಕೆರೆಗಳಿಗೆ ವಾಣಿವಿಲಾಸ
ಜಲಾಶಯದ ನೀರನ್ನು ಭರ್ತಿ ಮಾಡುವಂತೆ, ಆಗ್ರಹಿಸಲು
ಜೂನ್ 10 ರಂದು ಜವನಗೊಂಡನಹಳ್ಳಿ ಬಂದ್ ಆಚರಿಸಲು,
ಜವನಗೊಂಡನಹಳ್ಳಿಯಲ್ಲಿ ನೆಡೆದ ಸಭೆಯಲ್ಲಿ ಒಮ್ಮತದ
ತೀರ್ಮಾನ ಕೈಗೊಳ್ಳಲಾಯಿತು.
ಹೋಬಳಿಯ ಪ್ರತಿಗ್ರಾಮದಲ್ಲೂ
ನೀರಿನ ಅನಿವಾರ್ಯತೆಯ ಬಗ್ಗೆ ಜಾಗೃತಿ ಸಭೆ ನಡೆಸಿ, ಬಂದ್
ನಲ್ಲಿ ಹೆಚ್ಚು ಜನರು ಪಾಲ್ಗೊಳ್ಳುವಂತೆ ಮಾಡಬೇಕು ಎಂದು ರೈತ
ಮುಖಂಡರ ಕೆಟಿ ತಿಪ್ಪೇಸ್ವಾಮಿ ಸಲಹೆ ನೀಡಿದರು.