ಚಳ್ಳಕೆರೆ ನ್ಯೂಸ್ :
ದಿಢೀರ್ ಆಸ್ಪತ್ರೆಗೆ ಭೇಟಿ ನೀಡಿದ ಶಾಸಕರು: ಜಿಲ್ಲಾ
ಸರ್ಜನ್ ಗೆ ತರಾಟೆ
ಚಿತ್ರದುರ್ಗದ ಜಿಲ್ಲಾ ಆಸ್ಪತ್ರೆಗೆ ಶಾಸಕ ಕೆ ಸಿ ವೀರೇಂದ್ರ ಪಪ್ಪಿ
ದಿಢೀರ್ ಭೇಟಿ ನೀಡಿದ್ದಾರೆ.
ಜಿಲ್ಲಾ ಆಸ್ಪತ್ರೆಯ ಗರ್ಭಿಣಿಯರ
ವಾರ್ಡ್, ಮಕ್ಕಳ ಐಸಿಯು, ಸಾಮಾನ್ಯ ವಾರ್ಡ್ ಹಾಗೂ
ಡಯಾಲಿಸಿಸ್ ಸೆಂಟರ್ ಸೇರಿದಂತೆ ಸರ್ಜನ್ ರವೀಂದ್ರ ಜೊತೆ
ಭೇಟಿ ನೀಡಿದ ಶಾಸಕ ಕೆ ಸಿ ವೀರೇಂದ್ರ ಪಪ್ಪಿ,
ತಾಯಿ ಮತ್ತು ಮಕ್ಕಳ
ವಾರ್ಡ್ ಬಳಿ ಅಸ್ವಚ್ಚತೆ ಕಂಡು ಗರಂ ಆದ ಶಾಸಕರು ಸರ್ಜನ್
ರವೀಂದ್ರ ವಿರುದ್ಧ ಬೇಸರ ವ್ಯಕ್ತಪಡಿಸಿದರು.
ಶೀಘ್ರ ಸ್ವಚ್ಚತೆ
ಮಾಡುವಂತೆ ಜಿಲ್ಲಾ ಸರ್ಜನ್ ಗೆ ಸೂಚಿಸಿದರು.