ಚಳ್ಳಕೆರೆ ನ್ಯೂಸ್ :
ಶಿಕ್ಷಣ ಇಲಾಖೆಯಲ್ಲಿ ತುಘಲಕ್ ದರ್ಬಾರ್
ನಡೆಯುತ್ತಿದೆ
ಶಿಕ್ಷಣ ಮಂತ್ರಿಗಳು ಹಾಗೂ ಇಲಾಖೆಯ ಗೊಂದಲದಿಂದಾಗಿ
ಶಿಕ್ಷಕರು ಮತ್ತು ಅಧಿಕಾರಿಗಳು ಹೈರಾಣಾಗಿದ್ದಾರೆ ಎಂದು ಅಗ್ನೆಯ
ಶಿಕ್ಷಕರ ಕ್ಷೇತ್ರದ ಎನ್ ಡಿಎ ಅಭ್ಯರ್ಥಿ ವೈ ಎ ನಾರಾಯಣಸ್ವಾಮಿ
ಆರೋಪಿಸಿದರು.
ಅವರು ಚಿತ್ರದುರ್ಗದಲ್ಲಿ ಚುನಾವಣಾ ಪ್ರಚಾರ
ಸಭೆಯಲ್ಲಿ ಮಾತಾಡಿದರು.
ಇಲಾಖೆಯ ಗೊಂದಲಗಳಿಂದಾಗಿ
ಪೋಷಕರು ಕಂಗಾಲಾಗಿದ್ದಾರೆ.
ಶಿಕ್ಷಣ ಮಂತ್ರಿಗಳಿಗೆ ಶಿಕ್ಷಣದ
ಜ್ಞಾನವಿಲ್ಲ. ಇದರಿಂದ ತುಘಲಕ್ ದರ್ಬಾರ್ ನಡೆಯುತ್ತಿದೆ.
ಅಧಿಕಾರಿಗಳ ಮೇಲೆ ಹಿಡಿತವಿಲ್ಲದೆ, ದಿನಕ್ಕೊಂದು ಆದೇಶ
ಮಾಡುತ್ತಿದ್ದಾರೆಂದು ಹೇಳಿದರು.