ವಿಶ್ವಕರ್ಮ ಸಮುದಾಯದ ವತಿಯಿಂದ ಪಟ್ಟಣದ ಶ್ರೀ ಕಾಳಿಕಾದೇವಿ ಪಲ್ಲಕ್ಕಿ ಉತ್ಸವ ಮಂಗಳವಾರ ಅದ್ದೂರಿಯಾಗಿ ಜರುಗಿತು.
ನಾಯಕನಹಟ್ಟಿ:: ಶ್ರೀ ಕಾಳಿಕಾದೇವಿ ಏಳನೇ ವರ್ಷದ ವಾರ್ಷಿಕ ಸಮಾರಂಭದ ಪಲ್ಲಕ್ಕಿ ಉತ್ಸವ ಸಂಭ್ರಮ ಸಡಗರದಿಂದ ಜರುಗಿದೆ ಎಂದು ಕಾರ್ಯದರ್ಶಿ ಪಿ.ಲೋಕೇಶ್ ಚಾರ್ ಹೇಳಿದ್ದಾರೆ.
ಅವರು ಮಂಗಳವಾರ ಪಟ್ಟಣದ ಶ್ರೀ ಕಾಳಿಕಾದೇವಿ ಪಲ್ಲಕಿ ಉತ್ಸವ ಹಾಗೂ ನವಗ್ರಹ ಹೋಮ ಪೂಜಾ ಕೈಂ ಕಾರ್ಯಗಳನ್ನು ನೆರವೇರಿಸಿ ಮಾತನಾಡಿದ ಅವರು. ಪ್ರತಿವರ್ಷದ ಸಂಪ್ರದಾಯದಂತೆ 7ನೇ ವರ್ಷದ ಶ್ರೀ ಕಾಳಿಕಾದೇವಿ ವಾರ್ಷಿಕ ಸಮಾರಂಭ ಮತ್ತು ಹೋಮ ಗಣಪತಿ ಹೋಮ ನವಗ್ರಹ ಹೋಮ ವಿಶೇಷ ಪೂಜಾ ನೆರವೇರಿಸಿ ಮಂಗಳಾರತಿಯೊಂದಿಗೆ ಶ್ರೀ ಕಾಳಿಕಾ ದೇವಿ ಏಳನೇ ವರ್ಷದ ವಾರ್ಷಿಕ ಸಮಾರಂಭವನ್ನು ಮುಕ್ತಾಯಗೊಳಿಸಲಾಗಿದೆ.
ಈ ಒಂದು ವಾರ್ಷಿಕ ಸಮಾರಂಭಕ್ಕೆ ಸಹಕರಿಸಿದ ಮತ್ತು ವಿಶ್ವಕರ್ಮ ಸಮಾಜದ ಬಂಧುಗಳಿಗೆ ಅಭಿನಂದನೆಯನ್ನು ತಿಳಿಸಿದರು.
ಈಸಂದರ್ಭದಲ್ಲಿ ವಿಶ್ವಕರ್ಮ ಸಮಾಜ ಅಧ್ಯಕ್ಷರಾದ ಬಿ. ತಿಪ್ಪೇಸ್ವಾಮಿ ಚಾರ್, ಉಪಾಧ್ಯಕ್ಷ ಕೆ ವೆಂಕಟೇಶ್ ಚಾರ್. ಕಾರ್ಯದರ್ಶಿ ಪಿ ಲೋಕೇಶ್ ಚಾರ್, ಸಹ ಕಾರ್ಯದರ್ಶಿ ಆರ್ ಹನುಮಂತಚಾರ್, ಖಜಾಂಚಿ ಆರ್ ವೆಂಕಟೇಶ್ ಚಾರ್, ಯುವಕ ಸಂಘದವರು ಹಾಗೂ ವಿಶ್ವಕರ್ಮ ಸಮಾಜದ ಎಲ್ಲಾ ಮಹಿಳೆಯರು ಮತ್ತು ಸರ್ವ ಭಕ್ತಾದಿಗಳು ಸಮಾಜದ ಎಲ್ಲಾ ಬಂಧುಗಳು ಉಪಸ್ಥಿತರಿದ್ದರು