[3:12 PM, 5/21/2024] ರಾಮುದೊಡ್ಮನೆ ಚಳ್ಳಕೆರೆ?: ರಾಮಸಾಗರ ಗ್ರಾಮದಲ್ಲಿ 400 ವರ್ಷಗಳ ಇತಿಹಾಸವುಳ್ಳ ಮಾರಮ್ಮ ದೇವಸ್ಥಾನದ ಬೇವಿನಮರಕ್ಕೆ ಸಿಡಿಲು ಹೊಡೆದಿದೆ. ಕೆಪಿಸಿಸಿ ಪರಿಶಿಷ್ಟ ಪಂಗಡ ವಿಭಾಗ ಪಿ ಎಂ. ಮಂಜಣ್ಣ.

ನಾಯಕನಹಟ್ಟಿ:: ಮೇ.22.
ಸುಮಾರು 400 ವರ್ಷಗಳ ಇತಿಹಾಸವುಳ್ಳ ಶ್ರೀ ಮಾರಮ್ಮ ದೇವಿ ದೇವಸ್ಥಾನದ ಬೇವಿನಮರಕ್ಕೆ ಸೋಮವಾರ ರಾತ್ರಿ ಸಿಡಿಲು ಹೊಡೆದಿದೆ ಎಂದು ಕೆಪಿಸಿಸಿ ಪರಿಶಿಷ್ಟ ಪಂಗಡ ವಿಭಾಗ ಪಿ.ಎಂ. ಮಂಜಣ್ಣ ಹೇಳಿದ್ದಾರೆ.

ಅವರು ಮಂಗಳವಾರ ತಿಮ್ಮಪ್ಪಯ್ಯನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ರಾಮಸಾಗರ ಗ್ರಾಮದ ಶ್ರೀ ಮಾರಮ್ಮ ದೇವಿ ದೇವಸ್ಥಾನದ ಆವರಣದಲ್ಲಿ ಸಿಡಿಲು ಹೊಡೆದ ಬೇವಿನ ಮರವನ್ನು ವೀಕ್ಷಣೆ ಮಾಡಿ ಮಾತನಾಡಿದ ಅವರು ರಾಮಸಾಗರ ಗ್ರಾಮದಲ್ಲಿ ಸುಮಾರು 400 ರಿಂದ 500 ವರ್ಷಗಳ ಇತಿಹಾಸವುಳ್ಳ ಶ್ರೀ ಮಾರಮ್ಮ ದೇವಿ ದೇವಸ್ಥಾನದ ಬೇವಿನಮರಕ್ಕೆ ರಾತ್ರಿ ಸಿಡಿಲು ಹೊಡೆದಿದೆ ಪ್ರತಿ ವರ್ಷವೂ ಗೌರಸಮುದ್ರ ಮಾರಮ್ಮ ದೇವಿ ಜಾತ್ರಾ ವೇಳೆಯಲ್ಲಿ ನಮ್ಮ ಗ್ರಾಮದಲ್ಲಿ ಮಾರಮ್ಮ ದೇವಿಯ ಜಾತ್ರೆಯನ್ನು ಈ ಬೇವಿನ ಮರದ ಕಟ್ಟೆಯ ಆವರಣದಲ್ಲಿ ಮಾರಮ್ಮನ ಹಬ್ಬವನ್ನು ಆಚರಣೆ ಮಾಡಲಾಗುತ್ತದೆ ನಿನ್ನೆ ಸೋಮವಾರ ರಾತ್ರಿ ಸುರಿದ ಭಾರಿ ಮಳೆ ಗಾಳಿ ಸಿಡಿಲಿಗೆ ಶ್ರೀ ಮಾರಮ್ಮ ದೇವಿ ಬೇವಿನಮರಕ್ಕೆ ಸಿಡಿಲು ಹೊಡೆದಿರುವುದು ಆಶ್ಚರ್ಯ ಮೂಡಿಸಿದೆ ಎಂದರು.

ಇದೇ ವೇಳೆ ಗ್ರಾಮದ ಗ್ರಾಮ ಪಂಚಾಯತಿ ಮಾಜಿ ಸದಸ್ಯ ಸಣ್ಣ ತಿಪ್ಪಯ್ಯ, ಮಾತನಾಡಿದರು ನಮ್ಮ ರಾಮಸಾಗರ ಗ್ರಾಮದಲ್ಲಿ ತಾತ ಮುತ್ತಾತನ ಕಾಲದಿಂದಲೂ ಮಾರಮ್ಮ ದೇವಸ್ಥಾನದ ಕಟ್ಟೆಯಲ್ಲಿ ಇರುವಂತಹ ಬೇವಿನ ಮರಕ್ಕೆ ರಾತ್ರಿ ಸುರಿದ ಭಾರಿ ಮಳೆಗಾಳಿಗೆ ಸಿಡಿಲು ಹೊಡೆದಿದೆ ಎಂದರು.

ಇದೇ ಸಂದರ್ಭದಲ್ಲಿ ಊರಿನ ಗ್ರಾಮಸ್ಥರು ಇದ್ದರು
[3:15 PM, 5/21/2024] ರಾಮುದೊಡ್ಮನೆ ಚಳ್ಳಕೆರೆ?:

About The Author

Namma Challakere Local News
error: Content is protected !!