ಚಳ್ಳಕೆರೆ ನ್ಯೂಸ್ :
ರಾಜಕೀಯ ಭವಿಷ್ಯ ರೂಪಿಸುವ ಶಿಕ್ಷಕರ ಸಮೂಹವೇ
ನನ್ನ ಪಾಲಿನ ದೇವರು
ರಾಜಕೀಯ ಭವಿಷ್ಯ ರೂಪಿಸುವ ಶಿಕ್ಷಕರ ಸಮೂಹವೇ ನನ್ನ
ಪಾಲಿನ ದೇವರು ಎಂದು ಆಗ್ನೇಯ ಶಿಕ್ಷಕರ ಕ್ಷೇತ್ರದ ವಿಧಾನ
ಪರಿಷತ್ ಚುನಾವಣಾ ಕ್ಷೇತ್ರದ ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ
ಮೈತ್ರಿ ಅಭ್ಯರ್ಥಿ ವೈ. ಎ. ನಾರಾಯಣಸ್ವಾಮಿ ಹೇಳಿದರು.
ಇವರು ನಗರದ ಬಾಪೂಜಿ ಕಾಲೇಜಿನಲ್ಲಿ ನಡೆದ ಆಗ್ನೇಯ ಕ್ಷೇತ್ರದ
ವಿಧಾನ ಪರಿಷತ್ ಚುನಾವಣಾ ಮತ ಯಾಚನೆ ಸಭೆಯಲ್ಲಿ
ಅವರು ಮಾತನಾಡಿದರು.
ಶಿಕ್ಷಣ- ಶಿಕ್ಷಕರ ವಿರೋಧಿಯಾಗಿರುವ ರಾಜ್ಯದ
ಕಾಂಗ್ರೆಸ್ ಸರ್ಕಾರ, ಹೆಜ್ಜೆ ಹೆಜ್ಜೆಗೆ ಶೋಷಿಸುವ ಮೂಲಕ ಶಿಕ್ಷಕರ
ನೆಮ್ಮದಿ ಹಾಳು ಮಾಡಿದೆ ಎಂದರು.