ಚಳ್ಳಕೆರೆ ನ್ಯೂಸ್ :
ಮಾಡದಕೆರೆಯಲ್ಲಿ 40 ಮಿ. ಮೀ, ಮಳೆಯಾಗಿದೆ.
ಬರಗಾಲದಿಂದ ಸಂಘಟಿತ ಜನತೆಗೆ ಕೃತಿಕಾ ಮಳೆ ಬಂದು
ಹಳ್ಳ ಕೊಳ್ಳಗಳು ತುಂಬಿವೆ.
ಹೊಸದುರ್ಗ ತಾಲ್ಲೂಕಿನ
ಹೊಸದುರ್ಗದಲ್ಲಿ 46. 8ಮಿ. ಮೀ, ಬಾಗೂರಿನಲ್ಲಿ 3. 5 ಮಿ. ಮೀ,
ಮಾಡದಕೆರೆಯಲ್ಲಿ 40 ಮಿ. ಮೀ, ಮತ್ತೋಡಿನಲ್ಲಿ 10. 4ಮಿ.
ಮೀ ಹಾಗೂ ಶ್ರೀರಾಂಪುರದಲ್ಲಿ 30.2 ಮಿ. ಮೀ ಮಳೆಯಾಗಿದೆ.
ಕಡೂರು ಹಾಗೂ ಶ್ರೀರಾಂಪುರ ಸೇರಿದಂತೆ ಸುತ್ತಮುತ್ತ ಭಾರಿ
ಮಳೆಯಾಗುತ್ತಿದ್ದು ವೇದಾವತಿ ನದಿ ತುಂಬಿ ಹರಿಯುತ್ತಿದೆ.
ರಾಮಗಿರಿಯಲ್ಲಿ ಉತ್ತಮ ಮಳೆ ತುಂಬಿ ಹರಿದ ಚಕ್
ಡ್ಯಾಂಗಳು
ರಾತ್ರಿ ಸುರಿದ ಬಾರಿ ಮಳೆಗೆ ರಾಮಗಿರಿ ಹೋಬಳಿಯ
ಸುತ್ತಮುತ್ತಲಿನ ಚಕ್ ಡ್ಯಾಂಗಳು ಹಳ್ಳ ಕೊಳ್ಳಗಳು ತುಂಬಿ
ಹರಿಯುತ್ತಿವೆ.
ಮಲ್ಲನಹಳ್ಳಿ, ರಾಮಗಿರಿ, ಸಿಂಗೇನಹಳ್ಳಿ ಹಾಗೂ
ಇತರೇ ಗ್ರಾಮಗಳಿಗೆ ಉತ್ತಮ ಮಳೆಯಾಗಿದೆ. ಇದರಿಂದ ಬರದಿಂದ
ಬತ್ತಿ ಹೋಗಿದ್ದ, ಚಕ್ ಡ್ಯಾಂಗಳು ಹಾಗೂ ಹಳ್ಳಕೊಳ್ಳಗಳಿಗೆ ನೀರು
ಹರಿದು ಬಂದು ಭರ್ತಿಯಾಗಿವೆ. ಇದರಿಂದ ಹೋಬಳಿಯ ರೈತರು
ಸಂತಸಗೊಂಡಿದ್ದಾರೆ.