ಚಳ್ಳಕೆರೆ ನ್ಯೂಸ್ :
ಧಗ ಧಗನೆ ಹೊತ್ತಿ ಉರಿದ ಲಾರಿ
ಹಿರಿಯೂರಿನ ರಾಷ್ಟ್ರೀಯ ಹೆದ್ದಾರಿ 4ರ ಬೆಂಗಳೂರು ರಸ್ತೆಯಲ್ಲಿನ,
ಸ್ವಾಮಿಯಪ್ಪ ಹೋಟೆಲ್ ಬಳಿ ರಸ್ತೆಯ ಪಕ್ಕದಲ್ಲಿ ತಮಿಳುನಾಡು
ಪಾಸಿಂಗ್ ಹೊಂದಿರುವ ಲಾರಿಯ ಮುಂಭಾಗದಲ್ಲಿ ಬೆಂಕಿ
ಕಾಣಿಸಿಕೊಂಡು, ಹೊತ್ತಿ ಉರಿದಿದೆ.
ಲಾರಿ ಮುಂಭಾಗ ಸುಟ್ಟು
ಕರಕಲಾಗಿದೆ. ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಅಗ್ನಿಶಾಮಕ ದಳ
ಸಿಬ್ಬಂದಿ ಭೇಟಿ ನೀಡಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.