ಚಳ್ಳಕೆರೆ ನ್ಯೂಸ್ :
ಪ್ರಸಕ್ತ ವರ್ಷದ
ಪ್ರತಿಷ್ಠಿತ ಶಾಲೆಗಳು ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಮೊರಾರ್ಜಿ ದೇಸಾಯಿ ಶಾಲೆಯ ವಿದ್ಯಾರ್ಥಿನಿಯೇ ಸಾಕ್ಷಿಯಾಗಿದ್ದಾಳೆ.
ಅಂತೆಯೇ ಇತ್ತೀಚೆಗಷ್ಟೇ
ಪ್ರಕಟಗೊಂಡ ಎಸ್ ಎಸ್ ಎಲ್
ಸಿ ಫಲಿತಾಂಶದಲ್ಲಿ ತಾಲೂಕಿನ
ಆದರ್ಶ ವಿದ್ಯಾಲಯದ
ಎಲ್ಲಾ ವಿದ್ಯಾರ್ಥಿಗಳು
ಉತ್ತೀರ್ಣವಾಗುವ ಮೂಲಕ
ಶೇ.100 ಫಲಿತಾಂಶ ಲಭಿಸಿದೆ.
ಈ ಬಗ್ಗೆ ಮಾಹಿತಿ ನೀಡಿದ
ಶಾಲೆಯ ಪ್ರಾಂಶುಪಾಲ
ಅಶೋಕ್ ರೆಡ್ಡಿ ಮಾತನಾಡಿ
ಆದರ್ಶ
ವಿದ್ಯಾಲಯದಲ್ಲಿ
ಗಂಡು 38 ಹೆಣ್ಣು 33 ಒಟ್ಟು
71 ವಿದ್ಯಾರ್ಥಿಗಳು ದಾಖಲಾಗಿದ್ದು ಅತ್ಯುತ್ತಮ ಶ್ರೇಣಿಯಲ್ಲಿ 12
ಪ್ರಥಮ ದರ್ಜೆಯಲ್ಲಿ 49 ದ್ವಿತೀಯ ದರ್ಜೆಯಲ್ಲಿ 10 ವಿದ್ಯಾರ್ಥಿಗಳು
ಉತ್ತೀರ್ಣರಾಗಿದ್ದು
ಶ್ರೇಯ ಶ್ರೀ 597, ಧನುಷ್ ಜಿ ಎಸ್ 576, ಹರಿಣಿ
571, ಭಾಸ್ಕರ್ 570, ವಿದ್ಯಾರ್ಥಿಗಳು ಅತಿ ಹೆಚ್ಚಿನ ಅಂಕಗಳನ್ನು ಗಳಿಸಿ
ಶಾಲೆಗೆ ಕೀರ್ತಿ ತಂದಿದ್ದಾರೆ.
ವಿದ್ಯಾರ್ಥಿಗಳ ಮುಂದಿನ ಭವಿಷ್ಯ
ಉಜ್ವಲವಾಗಿರಲಿ ಶಾಲೆಯ ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗ
ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.