ಚಳ್ಳಕೆರೆ ನ್ಯೂಸ್ :

ನೀರಿನ ಕೊರತೆಯಿಂದ ಬಾಡಿ ಬಾಗಿ ಒಣಗುತ್ತಿರುವ
ಬಾಳೆ ಬೆಳೆ

ಹಿರಿಯೂರಿನ ಧರ್ಮಪುರ ಹೋಬಳಿ ಹಲಗಲದ್ದಿ, ಗ್ರಾಮದ ರೈತ
ಎಚ್ ಆರ್ ವೀರಭದ್ರಪ್ಪ, 22 ಎಕರೆ ಭೂಮಿ ಹೊಂದಿದ್ದು,

4 ಎಕರೆ
ದಾಳಿಂಬೆ 8 ಎಕರೆ ಬಾಳೆ 8 ಎಕರೆಯಲ್ಲಿ ಅಡಿಕೆ ಬೆಳೆದಿದ್ದಾರೆ.

ಆದರೆ
ಕೊಳವೆ ಬಾವಿಗಳಲ್ಲಿ ನೀರಿಲ್ಲದ ಕಾರಣ ದಿಕ್ಕು ತೋಚದಾಗಿದ್ದಾರೆ.

ನೀರಾವರಿ ಸೌಲಭ್ಯಕ್ಕಾಗಿ 26 ಕೊಳವೆ ಬಾವಿ ಕೊರೆಸಿದ್ದು,
ಅದರಲ್ಲಿ 6 ಕೊಳವೆ ಬಾವಿಗಳಲ್ಲಿ ನೀರು ಬರುತ್ತಿದೆ.

ಅಡಿಕೆ ಬೆಳೆ
ಉಳಿಸಿಕೊಳ್ಳುವುದು ದುಸ್ತರವಾಗಿದೆ. ಸಮೃದ್ಧವಾಗಿ ಬೆಳೆದ
ಬಾಳೆಗೊನೆ ಒಣಗಿದೆ ಎಂದು ಅಳಲು ತೋಡಿಕೊಳ್ಳುತ್ತಾರೆ.

About The Author

Namma Challakere Local News
error: Content is protected !!