ಚಳ್ಳಕೆರೆ ನ್ಯೂಸ್ :
ಚಿತ್ರದುರ್ಗ ದ ಏಳು ಸುತ್ತಿನ
ಕಲ್ಲಿನ ಕೋಟೆಯನ್ನು ಬೆಚ್ಚಿಬಿಳಿಸಿದ್ದ
ಐದು ಅಸ್ಥಿಪಂಜರಗಳ ವರದಿವನ್ನು ಬಹಿರಂಗ ಪಡಿಸಿದ ಎಸ್ಪಿ
ಕಳೆದ ಡಿಸೆಂಬರ್ ನಲ್ಲಿ ಚಿತ್ರದುರ್ಗ ಜಿಲ್ಲೆಯನ್ನಷ್ಟೆ ಅಲ್ಲದೆ, ರಾಜ್ಯದ
ಜನತೆಯನ್ನು ಬೆಚ್ಚಿ ಬೀಳಿಸಿದ್ದ ಒಂದೇ ಕುಟುಂಬದ ಐದು ಸ್ಕೆಲಿಟನ್
ಗಳ ಎಫ್ ಎಸ್ ಎಲ್ ವರದಿ ಬಹಿರಂಗಗೊಂಡಿದೆ.
ನಿದ್ರೆ ಮಾತ್ರೆ
ಸೇವಿಸಿ ಸೂಸೈಡ್ ಮಾಡಿಕೊಂಡಿದ್ದಾರೆ.
ಎರಡು ಪಾತ್ರೆಯಲ್ಲಿ
ಸೈನೈಡ್ ಅಂಶ ಕೂಡಾ ಪತ್ತೆಯಾಗಿದೆ. ಆದರೆ ಮೃತದೇಹಗಳಲ್ಲಿ
ಸೈನೈಡ್ ಅಂಶ ಪತ್ತೆಯಾಗಿಲ್ಲ ಎಂದು ಎಸ್ಪಿ ಧರ್ಮೇಂದ್ರ
ಕುಮಾರ್ ಮೀನಾ ಹೇಳಿದರು.
ಐದು ಅಸ್ಥಿ ಪಂಜರಗಳ ಮೂಳೆ
ಮತ್ತು ಅಗತ್ಯವಿರುವ 71 ವಸ್ತುಗಳನ್ನು ಎಫ್ ಎಸ್ ಎಲ್ ಗೆ
ಕಳುಹಿಸಲಾಗಿತ್ತು ಎಂದರು.
ಅಡುಗೆ ಪಾತ್ರೆಯಲ್ಲಿ ಸೈನೈಡ್ ಇದ್ದಿದ್ದು ವರದಿಯಲ್ಲಿ
ಬಹಿರಂಗವಾಗಿದೆ
ಎಫ್ ಎಸ್ ಎಲ್ ನೀಡಿರುವ ವರದಿಯಲ್ಲಿ, ಅಸ್ಥಿ ಪಂಜರಗಳ
ಮೂಳೆಗಳಲ್ಲಿ, ಎಲ್ಲೂ ಪೆಟ್ಟು ಬಿದ್ದಿರುವ ಗುರುತುಗಳು
ಕಂಡುಬಂದಿಲ್ಲ ಎಂದು ವರದಿ ಬಂದಿದೆ ಎಂದು ಎಸ್ಪಿ ಧರ್ಮೇಂದ್ರ
ಕುಮಾರ್ ಮೀನಾ ಹೇಳಿದರು.
ಅವರು ಮಾಧ್ಯಮಗಳೊಂದಿಗೆ
ಮಾತಾಡಿ, ಇನ್ನು ಅಡುಗೆ ಮನೆಯಲ್ಲಿದ್ದ ಎರಡು ಪಾತ್ರೆ ಚಮಚ
ಮತ್ತು ಬೌಲ್ ನಲ್ಲಿದ್ದ ವಸ್ತು ಪರೀಕ್ಷಿಸಿದ್ದು, ಅದರಲ್ಲಿ, ಸೈನೈಡ್ ಗೆ
ಸಂಬಂಧಿಸಿದ್ದು ಇದ್ದಿದ್ದು, ಕಂಡು ಬಂದಿದೆ ಎಂದು ವರದಿಯನ್ನು
ನೀಡಿದ್ದಾರೆ ಎಂದು ಹೇಳಿದರು.