ಚಳ್ಳಕೆರೆ ನ್ಯೂಸ್ :
ಮೃತ ಶಿಕ್ಷಕ ಶಿವಕುಮಾರ್ ಕುಟುಂಬಕ್ಕೆ ಸಾಂತ್ವಾನ
ಹೇಳಿದ ಮಾಜಿ ಶಾಸಕಿ ಪೂರ್ಣಿಮಾ
ಸಿಪಿ ಮೂಡಲಗಿರಿಯಪ್ಪ ಗ್ರಾಮೀಣ ಪ್ರೌಢಶಾಲೆಯಲ್ಲಿ ವಿಜ್ಞಾನ
ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದ ಎಸ್. ಶಿವಕುಮಾರ್
ಇತ್ತೀಚೆಗೆ ಮೃತಪಟ್ಟಿದ್ದು,
ಅವರ ಮನೆಗೆ ತೆರಳಿದ ಹಿರಿಯೂರು
ಮಾಜಿ ಶಾಸಕಿ ಕೆ. ಪೂರ್ಣಿಮಾಶ್ರೀನಿವಾಸ್ ಕುಟುಂಬ ವರ್ಗಕ್ಕೆ
ಸಾಂತ್ವನ ತಿಳಿಸಿದರಲ್ಲದೆ,
ಆರ್ಥಿಕ ನೆರವು ನೀಡಿದರು.
ಇದೇ
ಸಂದರ್ಭದಲ್ಲಿ ಶಿವಕುಮಾರ್ ಪತ್ನಿ ಮಹಾಲಕ್ಷ್ಮಿಗೆ ಭರವಸೆ
ನೀಡಿದ ಅವರು,
ವಿಧಾನಪರಿಷತ್ ಚುನಾವಣೆ ನಂತರ ಮಕ್ಕಳಿಗೆ
ಯಾರಿಗಾದರೊಬ್ಬರಿಗೆ ಸರ್ಕಾರಿ ನೌಕರಿ ಕೊಡಿಸುವ ಭರವಸೆ
ನೀಡಿದರು.