ಚಳ್ಳಕೆರೆ ನ್ಯೂಸ್ :
ಸಿದ್ದೇಶ್ವರ ಸ್ವಾಮಿ ಜಾತ್ರೆ ಹಿನ್ನೆಲೆ ಪೊಲೀಸ್ ಠಾಣೆಯಲ್ಲಿ
ಶಾಂತಿ ಸಭೆ
ಮೊಳಕಾಲ್ಮೂರು ಪಟ್ಟಣದ ಪೊಲೀಸ್ ಠಾಣೆ ಆವರಣದಲ್ಲಿ
ಶ್ರೀ ನುಂಕಿಮಲೆ ಸಿದ್ದೇಶ್ವರ ಸ್ವಾಮಿ ಜಾತ್ರಾ ಪ್ರಯುಕ್ತವಾಗಿ
ಶಾಂತಿ ಸಭೆಯನ್ನ ಮಾಡಲಾಯಿತು.
ಈ ಸಭೆಯಲ್ಲಿ ಪಿಎಸ್‌ಐ
ಪಾಂಡುರಂಗಪ್ಪ ಮಾತನಾಡಿ 33 ಹಳ್ಳಿಗಳಿಂದ ನಡೆಯುವ ಈ
ಜಾತ್ರೆಗೆ ದೂರ ವಲಸೆ ಹೋಗಿ ಊರುಗಳಿಂದ ಆಗಮಿಸುವ
ಯುವಕರು ಇಲ್ಲಿನ ನಿಯಮ ಪದ್ಧತಿಗಳಿಗೆ ಬದ್ಧರಾಗದೆ
ತಮಗಿಷ್ಟ ಬಂದ ರೀತಿಯಲ್ಲಿ ವರ್ತಿಸಿ ವಾಪಸ್ಸು ಆಗುತ್ತಾರೆ.
ಆದರೆ ಅವರುಗಳು ಸೃಷ್ಟಿಸುವ ಅವತಾರಗಳನ್ನ ಅವರ ಪೋಷಕ
ಸಂಬಂಧಗಳು ಅನುಭವಿಸಬೇಕಾಗುತ್ತದೆ ಎಂದರು.