ಚಳ್ಳಕೆರೆ ನ್ಯೂಸ್ :
ಮೂರು ಸಾವಿರ ಪರಿಹಾರದ ಬದಲು ಗೌರವಯುತ
ಮೊತ್ತ ನೀಡಿ
ಸರ್ಕಾರ ಬರ ಪರಿಹಾರ ಎಂದು ರೈತರಿಗೆ ನೀಡುತ್ತಿರುವ ಮೂರು
ಸಾವಿರ ಹಣ ಯಾವುದಕ್ಕೂ ಸಾಕಾಗುತ್ತಿಲ್ಲ ಎಂದು ರೈತ ಸಂಘದ
ರಾಜ್ಯ ಪ್ರಧಾನ ಕಾರ್ಯದರ್ಶಿ ಈಚಘಟ್ಟದ ಸಿದ್ದವೀರಪ್ಪ
ಅಸಮಾಧಾನ ಹೊರ ಹಾಕಿದರು.
ಅವರು ಹೊಳಲ್ಕೆರೆಯಲ್ಲಿ
ಮಾಧ್ಯಮಗಳೊಂದಿಗೆ ಮಾತಾಡಿದರು. ಸಣ್ಣ ಮೊತ್ತವನ್ನು ಕೊಟ್ಟು
ಕೈತೊಳೆದುಕೊಳ್ಳುವುದು ಒಳ್ಳೆಯ ಬೆಳವಣಿಗೆ ಅಲ್ಲ.
ರೈತರಿಗೆ
ಸರ್ಕಾರ ಗೌರವಯುತವಾದ ಮೊತ್ತವನ್ನು ತಲುಪಿಸಬೇಕು ಎಂದು
ಒತ್ತಾಯಿಸಿದರು.