ಚಳ್ಳಕೆರೆ : ಅತಿಕ್ರಮಿಸಿರುವ ಬಂಡಿ ಜಾಡನ್ನು ಹಾಗೂ ಕೆರೆ ಕಾಲುವೆಯನ್ನು ರೈತರಿಗೆ ಬಿಡಿಸಿಕೊಡುವಂತೆ ತಹಶೀಲ್ದಾರ್ ಗೆ ಮನವಿ ಸಲ್ಲಿಸಿದ ಗ್ರಾಮಸ್ಥರು.
ಹೌದು ಚಳ್ಳಕೆರೆ ತಾಲ್ಲೂಕು ಮನ್ನಕೋಟೆ ಗ್ರಾಮದ ರೈತರು ನೂರಾರು ವರ್ಷಗಳಿಂದ ಮನ್ನಕೋಟೆಯಲ್ಲಿ ವಾಸವಾಗಿದ್ದು, ಮೂಲತಃ ಕೃಷಿಯನ್ನು ನಂಬಿ ಜೀವನವನ್ನು ನಡೆಸುತ್ತಿದ್ದೇವೆ. ಸುಮಾರು 60-70 ವರ್ಷಗಳ ಹಿಂದೆ ನಮ್ಮ ಭೂಮಿ ಕೋಡಿಹಳ್ಳಿ ಕೆರೆಯ ಹೂವಿನ ಕಾಲುವೆವರೆಗೂ ನೀರಾವರಿ ವ್ಯವಸ್ಥೆಗೆ ಒಳಪಟ್ಟು ಕೃಷಿಯನ್ನು ಮಾಡಲಾಗುತ್ತಿತ್ತು,
ಕಾಲಾಂತರದಲ್ಲಿ ಈ ವ್ಯವಸ್ಥೆ ನಿಂತು ಹೋಗಿ ಮಳೆಯಾಶ್ರಿತವಾಯಿತು. ಸದರಿ ಆ ಕೆರೆ ಕಾಲುವೆ ಹಾಗೂ ಅದರ ಪಕ್ಕದಲ್ಲಿ ಇದ್ದ ಬಂಡಿ ಜಾಡನ್ನು ಸರ್ವೇ ನಂಬರ್ 135 ರ ಜಮೀನು ಮಾಲೀಕರಾದ ರಾಜ್ಯ ಸರಕಾರದ ಸಚಿವ ಡಿ.ಸುಧಾಕರ್ ರವರಿಗೆ ಸೇರಿದ್ದಾಗಿದೆ,
ಆದರೆ ಈ ಜಮೀನನ್ನು ವಾಣಿಜ್ಯ ಉದ್ದೇಶಗಳಿಗಾಗಿ ಇನ್ಫೋಸಿಸ್ ಸಂಸ್ಥೆಗೆ ಗುತ್ತಿಗೆ ನೀಡಿದ್ದಾರೆ ಎಂಬ ಮಾಹಿತಿ ಇದೆ ಆದರೆ ಅವರು ಜಮೀನು ಮಾರಾಟ ಮಾಡುವುದಕ್ಕೆ ನಮ್ಮ ತಕಾರರು ಇಲ್ಲ, ಆದರೆ ನಕಾಶೆ ಕಂಡ ದಾರಿಯನ್ನು ಆಕ್ರಮಿಸಿಕೊಳ್ಳುವುದು ಈ ಭಾಗದ ರೈತರಿಗೆ ಹೊಟ್ಟೆ ಮೇಲೆ ಬಟ್ಟೆ ಹಾಕಿದಂತೆ ಹಾಗುತ್ತಿದೆ ಆದ್ದರಿಂದ ಇನ್ಫೋಸಿಸ್ ಸಂಸ್ಥೆಯವರು ಬಂದೋಬಸ್ತ್ ಕಾರ್ಯವನ್ನು ಆರಂಭಿಸಿದ್ದು, ನಮ್ಮ ಜಮೀನುಗಳಿಗೆ ಕೋಡಿಹಳ್ಳಿ ಕೆರೆಯಿಂದ ಬರುವ ಈ ಕೆರೆ ಕಾಲುವೆ ಹಾಗೂ ಪಕ್ಕದ ಬಂಡಿ ಜಾಡನ್ನು ಅತಿಕ್ರಮಣ ಮಾಡುವುದನ್ನು ಈ ಕೂಡಲೆ ತಡೆದು ನಮಗೆ ದಾರಿ ಹಾಗೂ ಕಾಲುವೆಯನ್ನು ಉಳಿಸಿಕೊಡಬೇಕು ಎಂದರು.
ಇದರಿAದ ಸುಮಾರು ನೂರಾರು ರೈತರಿಗೆ, ಕುರಿಗಾಹಿಗಳಿಗೆ ಮತ್ತು ವಾಹನ ಸವಾರರಿಗೆ ಓಡಾಡಲು ಅಡ್ಡಿಯಾಗುವುದರ ಜೊತೆಗೆ ಕಾಲುವೆ ನೀರಾವರಿ ವ್ಯವಸ್ಥೆಗೂ ದಕ್ಕೆ ಉಂಟಾಗಿದೆ. ಆದ ಕಾರಣ ತಲೆ ತಲಾಂತರಗಳಿAದ ಬಂದ ನಮ್ಮ ದಾರಿ ಹಾಗೂ ಕಾಲುವೆ ಸೇವೆ ಮತ್ತು ಬಳಕೆಯ ಹಕ್ಕನ್ನು ನಮ್ಮಿಂದ ಕಿತ್ತುಕೊಂಡ ಯಾರೇ ಜಮೀನು ಮಾಲೀಕ ಆಗಿರಲಿ ಅಥವಾ ಗುತ್ತಿಗೆದಾರರಾಗಿರಲಿ ಅವರಿಂದ ನಮಗೆ ನ್ಯಾಯ ದೊರಕಿಸಿ ಕೋಡಲು ಕೋರಲಾಗಿದೆ ಎಂದು ಮನವಿಯಲ್ಲಿ ಉಲ್ಲೆಖಿಸಿದ್ದಾರೆ.
ಇದೇ ಸಂಧರ್ಭದಲ್ಲಿ ರೈತರ ಬಸವರಾಜಪ್ಪ, ದೊಡ್ಡ ಬಸಯ್ಯ, ಸಣ್ಣ ಸಿದ್ದಯ್ಯ, ಶಾಂತಣ್ಣ, ರೇವಣ್ಣ, ಭಿಮಣ್ಣ, ಎಂ.ಬಿ.ಚAದ್ರಣ್ಣ, ಕುಮಾರ್ ಡಿಬಿ. ಜಗದೀಶ್, ಈರಣ್ಣ ಇತರರು ಸ್ಥಳದಲ್ಲಿ ಪ್ರತಿಭಟಿಸಿದರು.