ಚಳ್ಳಕೆರೆ : ಕಳೆದ ಹಲವಾರು ವರ್ಷಗಳಿಂದ ಈದೇ ದಾರಿಯಿಲ್ಲಿ ಗ್ರಾಮದ ಸಾರ್ವಜನಿಕರು ಓಡಾಡುತ್ತಿದ್ದೆವೆ ಆದರೆ ಈಗ ಏಕಾ ಏಕಿ ದಾರಿ ಬಂದ ಮಾಡಿದರೆ ನಾವು ಹೇಗೆ ಓಡಾಡೋದು ಎಂದು ತಹಶೀಲ್ದಾರ್ ಬಳಿ ಗ್ರಾಮದ ಸಾರ್ವ ಜನಿಕರು ಅಳಲು ತೋಡಿಕೊಂಡರು.
ಹೌದು ಚಳ್ಳಕೆರೆ ತಾಲೂಕಿನ ಕಸ್ತೂರಿ ತಿಮ್ಮನಹಳ್ಳಿ ಗ್ರಾಮದ ನೂರಾರು ಸಾರ್ವಜನಿಕರು ತಾಲೂಕು ಕಛೇರಿಗೆ ಆಗಮಿಸಿ ತಹಶೀಲ್ದಾರ್ ಗೆ ಮನವಿ ಸಲ್ಲಿಸಿ ಮಾತನಾಡಿದರು.
ಸುಮಾರು ಇಪ್ಪತ್ತರಿಂದ ಮೂವತ್ತು ವರ್ಷಗಳಿಂದ ಈದೇ ದಾರಿಯಲ್ಲಿ ಗ್ರಾಮಕ್ಕೆ ಹೋಗಿ ಬರುತ್ತೆವೆ ಆದರೆ ಕಳೆದ ಕೆಲವು ದಿನಗಳ ನಂತರ ಮಾರಾಟವಾದ ಈ ಜಮೀನು ಖಾಸಗಿಯವರು ಮಾರಟಕ್ಕೆ ಪಡೆದಿದ್ದಾರೆ ಇದರಿಂದ ಹತ್ತಾರು ವರ್ಷಗಳಿಂದ ರೂಢಿಗತವಾಗಿ ಓಡಾಡಿಕೊಂಡು ಬಂದ ಈ ದಾರಿಯನ್ನು ಬಿಡಿಸಿಕೊಡಬೇಕು ಎಂದು ಒತ್ತಾಯಿಸಿದರು.
ಇದೇ ಸಂಧರ್ಭದಲ್ಲಿ ಗ್ರಾಮ ಪಂಚಾತಿಯಿ ಸದಸ್ಯ ರಾಜಣ್ಣ ಮಾತನಾಡಿ, ಸುಮಾರು ವರ್ಷಗಳಿಂದ ಈದೇ ದಾರಿಯಲ್ಲಿ ಶಾಲಾ ಮಕ್ಕಳು ಹಾಗೂ ಸಾರ್ವ ಜನಿಕರು ಓಡಾಡಿಕೊಂಡು ಬರುತ್ತಿದ್ದಾರೆ ಆದ್ದರಿಂದ ಈದೇ ದಾರಿ ಬೇಕು ಎಂದರು,
ಇನ್ನೂ ಮಾಜಿ ಸದಸ್ಯ ಈರಣ್ಣ ಮಾಧ್ಯಮದೊಂದಿಗೆ ಮಾತನಾಡಿ, ನಮ್ಮ ಗ್ರಾಮಕ್ಕೆ ದಾರಿ ಕೇಳುಲು ಬಂದಿದ್ದೆವೆ ಅದರಂತೆ ಸೋಮವಾರ ತಹಶೀಲ್ದಾರ್ ಸ್ಥಳ ಪರೀಶೀಲನೆ ಮಾಡಿ ದಾರಿಗೆ ಅನುಕೂಲ ಮಾಡಲಾಗುವುದು ಎಂದು ಹೇಳಿದ್ದಾರೆ ಎಂದರು.
ಇದೇ ಸಂಧರ್ಭದಲ್ಲಿ ಊರಿನ ಗ್ರಾಮಸ್ಥರಾದ ತಿಪ್ಪೆಸ್ವಾಮಿ ಮಾತನಾಡಿದರು, ರೈತರ ಮುಖಂಡರಾದ ಶ್ರೀಕಂಠಮೂರ್ತಿ, ಇನ್ನೂ ಮನವಿ ಪತ್ರ ನೀಡಲು ಚಂದ್ರಣ್ಣ, ಕರಿಯಣ್ಣ, ಭದ್ರಪ್ಪ, ವೀರೇಶ್, ಶ್ರೀಧರ್, ನವೀನ್, ಲಿಂಗರಾಜ್, ತಿಪ್ಪೆಸ್ವಾಮಿ, ಜಯಣ್ಣ, ರಾಜು ಇತರರು ಇದ್ದರು.

Namma Challakere Local News
error: Content is protected !!