ಚಳ್ಳಕೆರೆ ನ್ಯೂಸ್ :
ವಿಠಲ ನಗರದಲ್ಲಿ ಮನೆಯ ಕಳ್ಳತನಕ್ಕೆ ಯತ್ನ,
ಚಳ್ಳಕೆರೆ ನಗರದ ಚಿತ್ರದುರ್ಗ ರಸ್ತೆಯ ವಿಠಲ ನಗರದಲ್ಲಿರುವ ಗ್ರಾಮ ಲೆಕ್ಕಾಧಿಕಾರಿ
ಎಂಜಿ. ಹರೀಶ್ ಕುಮಾರ್ ಇವರ ಮನೆಯಲ್ಲಿ ಕಳ್ಳತನಕ್ಕೆ ಕಳನೊಬ್ಬ
ಯತ್ನ ಮಾಡಿದ್ದು ವಿಫಲವಾಗಿದೆ.
ಕಬ್ಬಿಣದ ಕಂಬಿಯಿಂದ ಮನೆಯ
ಕಬ್ಬಿಣದ ಬಾಗಿಲು ಮುರಿಯಲು ಪ್ರಯತ್ನ ನಡೆಸಿದ್ದು ಕೆಳಮನೆಯಲ್ಲಿ
ವಾಸ ಮಾಡುವ ಅರಣ್ಯ ಅಧಿಕಾರಿ ಅಧಿಕಾರಿ ರಾಜೇಶ್ ಕಳ್ಳತನದ
ಶಬ್ದ ಕೇಳಿ ತಕ್ಷಣವೆ ಪೊಲೀಸ್ ಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ
ಪೊಲೀಸರು ಸ್ಥಳಕ್ಕೆ ಆಗಮಿಸುವ ವೇಳೆ ಕಳ್ಳ ತಪ್ಪಿಸಿಕೊಂಡು ಓಡಿ
ಹೋಗಿದ್ದಾನೆ.