ಚಳ್ಳಕೆರೆ ನ್ಯೂಸ್ :
ಈಜಲು ಹೋಗಿ ನೀರು ಪಾಲಾದ ವ್ಯಕ್ತಿ
ಕೆರೆಯಲ್ಲಿ ಈಜಲು ಹೋಗಿದ್ದ ವ್ಯಕ್ತಿ ತಲೆಗೆ ಕಲ್ಲು ಬಡಿದು ವ್ಯಕ್ತಿ
ಮೃತಪಟ್ಟಿರುವ ಘಟನೆ ಹೊಳಲ್ಕೆರೆ ಕ್ಷೇತ್ರದ ಕಾತ್ರಾಳು ಕೆರೆಯಲ್ಲಿ
ನಡೆದಿದೆ.
ಮೃತ ವ್ಯಕ್ತಿಯನ್ನು ಆಂಧ್ರಪ್ರದೇಶದ ಭದ್ರಾಚಲಂ ನವನು
ಎಂದು ಗುರುತಿಸಲಾಗಿದೆ.
ಕಾತ್ರಾಳು ಕೆರೆ ಬಳಿ ಬೋರ್ ವೆಲ್ ಲಾರಿ
ರಿಪೇರಿ ಸಮಯದಲ್ಲಿ ಕುಡಿದ ಮತ್ತಿನಲ್ಲಿದ್ದ ವ್ಯಕ್ತಿ ಈಜಲು ಕೆರೆಗೆ
ಧುಮುಕಿದಾಗ ಕಲ್ಲಿನಿಂದ ತಲೆಗೆ ಪೆಟ್ಟು ಬಿದ್ದು, ಮೃತಪಟ್ಟಿದ್ದಾನೆ.
ಭರಮಸಾಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ,
ಪ್ರಕರಣ ದಾಖಲಿಸಿಕೊಂಡಿದ್ದಾರೆ.