ಚಳ್ಳಕೆರೆ ನ್ಯೂಸ್ :
ಲೋಕಾರ್ಪಣೆಗೊಂಡ ಶ್ರೀ ಕಣಿವೆ ಮಾರಮ್ಮ
ಮಹಾದ್ವಾರ
ಹಿರಿಯೂರಿನ ಶಿಡ್ಲಯ್ಯನಕೋಟೆ ಶ್ರೀ ಕಣಿವೆ ಮಾರಮ್ಮ
ದೇವಿಯ ಮಹಾದ್ವಾರ ಉದ್ಘಾಟನೆ,
ಹಾಗೂ ಕಳಸ ಪ್ರತಿಷ್ಟಾಪನೆ
ಕಾರ್ಯಕ್ರಮ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆ ಯಿಂದ
ನೆರವೇರಿತು.
ಮಡಿವಾಳ ಸಮಾಜದ ಗುಡ್ಡದ ಗುಡಿ ಕಟ್ಟಿನ ಆರಾಧ್ಯ
ದೈವ, ಹಾಗೂ ಗ್ರಾಮ ದೇವತೆಗೆ ಕುಲ ಬಾಂಧವರ ಸಹಕಾರ ಹಾಗೂ
ಗ್ರಾಮಸ್ಥರ, ಸಹಯೋಗದೊಂದಿಗೆ ನಿರ್ಮಾಣವಾದ ಶ್ರೀ ಕಣಿವೆ
ಮಾರಮ್ಮ ದೇವಿಯ ನೂತನ ಪ್ರವೇಶ ದ್ವಾರವು ಸಾವಿರಾರು ಭಕ್ತರ
ಸಮ್ಮುಖದಲ್ಲಿ ಲೋಕಾರ್ಪಣೆಯಾಯಿತು.