ಚಳ್ಳಕೆರೆ: ನಾನು ನನ್ನ ಕರ್ತವ್ಯವನ್ನು ಸರಿಯಾದ ರೀತಿಯಲ್ಲಿ ನಿಭಾಯಿಸಿದ್ದೆನೆ, ಲೋಕ ಆಧಾಲತ್‌ನಲ್ಲಿ ಉತ್ತಮ ಸ್ಪಂಧನೆ ಕೂಡ ಸಿಕ್ಕಿದೆ ಎಂದು ವರ್ಗಾವಣೆಗೊಂಡ ಪ್ರಧಾನ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶೆ ರೇಷ್ಮಾ ಕಲಕೊಪ್ಪ ಗೋಣೆ ಅಭಿಪ್ರಾಯ ಪಟ್ಟರು.
ನಗರದ ನ್ಯಾಯಾಲಯದ ಆವರಣದಲ್ಲಿ ವಕೀಲರ ಅಸೋಶಿಯೆಶನ್ ನಿಂದ ನ್ಯಾಯದೀಶರ ವರ್ಗಾವಣೆ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು. ಕಳೆದ ಮೂರು ವರ್ಷದಲ್ಲಿ ಹಾಗದೆ ಇರುವ ಪ್ರಕರಣಗಳನ್ನು ಇತ್ಯರ್ಥ ಪಡಿಸಲಾಗಿದೆ, ಚಳ್ಳಕೆರೆ ತಾಲೂಕು ಅತ್ಯಂತ ಹಿಂದುಳಿದ ತಾಲೂಕಾಗಿದ್ದು ಬಡ ಹಾಗೂ ಮಧ್ಯಮ ವರ್ಗದ ಜನರು ಹಾಗೂ ರೈತಾಪಿ ವರ್ಗ ಹೆಚ್ಚಿನದಾಗಿ ವಾಸ ಮಾಡುವ ಪ್ರದೇಶವಾಗಿದ್ದು ಪ್ರತಿನಿತ್ಯ ತಮ್ಮ ಪ್ರಕರಣಗಳನ್ನು ಹೊತ್ತು ಬರುವ ನೊಂದವರ ಬಾಳಿಗೆ ನ್ಯಾಯಲಾಯ ಬೆಳಕಾಗಬೇಕು ಆಗ ಮಾತ್ರ ಸತ್ಯಕ್ಕೆ ಜಯ ಸಿಕ್ಕಂತಾಗುತ್ತಿದೆ, ಪ್ರತಿಯೊಬ್ಬ ವಕೀಲರು ಕೂಡ ವೃತ್ತಿಗೌರವ ಮೆರೆಯಬೇಕು, ಅದರಂತೆ ನಾನು ಇಲ್ಲಿ ಕರ್ತವ್ಯ ನಿರ್ವಹಿಸಿರುವುದು ನನಗೆ ನೆಮ್ಮದಿ ನೀಡಿದೆ ಯಾವುದೇ ವ್ಯಕ್ತಿಯನ್ನು ಗುರಿಯಾಗಿಸಿಕೊಂಡು ನ್ಯಾಯಾಧೀಶರಾದ ನಾವು ತೀರ್ಪು ನೀಡುವುದಿಲ್ಲ ಇಲ್ಲಿ ಕೆಲಸ ಮಾಡಿದ್ದು ತುಂಬಾ ಸಂತೋಷದಾಯಕವಾಗಿದೆ ಎಲ್ಲಾ ವಕೀಲರು ಹಾಗೂ ನ್ಯಾಯಾಲಯದ ಸಿಬ್ಬಂದಿ ಸಹಕಾರ ನೀಡಿರುವುದನ್ನು ನಾನು ಮರೆಯುವುದಿಲ್ಲ ಎಂದು ತಿಳಿಸಿದರು.
ಇನ್ನೂ ನ್ಯಾಯಾಧೀಶರಾದ ಗೌಡ ಜಗದೀಶ ರುದ್ರೆ ಮಾತನಾಡಿ, ನೂರು ಜನ ಅಪರಾಧಿಗಳು ತಪ್ಪಿಸಿಕೊಂಡರು ಒಬ್ಬನಿರಪರಾಧಿಗೆ ಶಿಕ್ಷೆ ಆಗಬಾರದು ಎಂಬ ನ್ಯಾಯಾಂಗದ ಧೈಯವನ್ನು ಎತ್ತಿ ಹಿಡಿಯುವಂತೆ ಕರ್ತವ್ಯ ನಿರ್ವಹಿಸಬೇಕು ಎಂದು ಕರೆ ನೀಡಿದರು.
ವಕೀಲರ ಸಂಘದ ಅಧ್ಯಕ್ಷ ಕೆಎಂ.ನಾಗರಾಜ್ ಮಾತನಾಡಿ, ನ್ಯಾಯ ಆದಾಲತ್‌ಗಳ ಮೂಲಕ ಹಲವು ಪ್ರಕರಣಗಳನ್ನು ಚತ್ಯರ್ಥ ಪಡಿಸಿ, ಕಕ್ಷಿದಾರರು ಸಮಾಜದಲ್ಲಿ ಉತ್ತಮ ಜೀವನ ಕಟ್ಟಿಕೊಳ್ಳಲು ಅನುಕೂಲವಾಗಿದೆ, ನ್ಯಾಯಾಧೀಶರಾದ ರೇಷ್ಮಾ ಕಲಕಪ್ಪ ಗೋಣಿ ಹಾಗೂ ಗೌಡ ಜಗದೀಶರುದ್ರೆ ಎಂದರು.
ಈ ವೇಳೆ ಅಪಾರ ಸಿವಿಲ್ ನ್ಯಾಯಾಧೀಶರಾದ ಹೆಚ್.ಆರ್. ಹೇಮಾ ಸೇರಿದಂತೆ ಹಲವು ವಕೀಲರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಹಂಚಿಕೊAಡರು.
ಈ ಸಂದರ್ಭದಲ್ಲಿ ವಕೀಲರದ ಸಂಘದ ಉಪಾಧ್ಯಕ್ಷರಾದ ಬಿ.ಪಾಲಯ್ಯ, ಕಾರ್ಯದರ್ಶಿ ಎಂ.ಎಸ್.ಸಿದ್ದರಾಜು, ಕಾರ್ಯಕಾರಿ ಸಮಿತಿ ಸದಸ್ಯರಾದ ಡಿ.ಬಿ.ಬೋರಯ್ಯ, ಶ್ರೀನಿವಾಸ್ ಟಿ.ತಮ್ಮಣ್ಣ ಜಿ.ಶರಣಪ್ಪಯ್ಯ, ಜಿ.ಎಂ.ಆನAದ ಎಂ.ಎಸ್.ಜಗದೀಶ ನಾಯಕ, ಕೆ.ಟಿ.ರುದ್ರೇಶ, ಮಧುಮತಿ, ಶಿಲ್ಪಶ್ಯಾಮಲ, ಯು.ತಿಪ್ಪೇಸ್ವಾಮಿ ಪೆನ್ನಯ್ಯ ಸಣೋಬಯ್ಯ ,ರುದ್ರೇಶ,, ಹಿರಿಯ ವಕೀಲರಾದ ದೊಡ್ಡರಂಗಪ್ಪ ವಕೀಲರ ಸಂಘದ ಸದಸ್ಯರು ವಕೀಲರು ಇದ್ದರು.