ಚಳ್ಳಕೆರೆ ನ್ಯೂಸ್ :

ಸಾಧನೆ ಎಂಬುದು ಯಾರಪ್ಪನ ಸೊತ್ತಲ್ಲ, ಸಾಧನೆಯನ್ನು ಬಡವರು ಮಾಡಬಹುದು ಶ್ರೀಮಂತರು ಮಾಡಬುದು‌, ಅದರಲ್ಲಿ ಮಹತ್ವದು ವಿದ್ಯೆ,, ವಿದ್ಯೆ ಎಂಬುದು ಕಷ್ಟಪಟ್ಟು‌ ಶ್ರಮದಿಂದ ಅಧ್ಯಯನ ಮಾಡಿದಾಗ ಮಾತ್ರ ಶ್ರೇಯಸ್ಸು ದೊರೆಯುತ್ತದೆ ಎಂದು ನಗರಸಭೆ ಮಾಜಿ ಸದಸ್ಯ ಆರ್.ಪ್ರಸನ್ನ ಕುಮಾರ್ ಹೇಳಿದರು.

ಅವರು ನಗರದಲ್ಲಿ ಸಾಹಿತಿ ಕೊರ್ಲಕುಂಟೆ ತಿಪ್ಪೇಸ್ವಾಮಿ ಯವರ ಪುತ್ರಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಶ್ರೇಣಿಯಲ್ಲಿ ತೇರ್ಗಡೆ ಹೋಂದಿದ್ದರಿಂದ ಕೆ.ಟಿ.ಅನುಪಮಾ ವಿದ್ಯಾರ್ಥಿಗೆ ಸ್ವೀಟ್ ನೀಡಿ ಸನ್ಮಾನ ಮಾಡಿ ಮಾತನಾಡಿದರು.

ಪತ್ರಕರ್ತರ ಮಕ್ಕಳು ‌ ಸಮಾಜದ ಮುಖ್ಯ ವಾಹಿನಿಗೆ ಬರಬೇಕು, ಆರ್ಥಿಕವಾಗಿ, ಸಾಮಾಜಿಕವಾಗಿ ಶೈಕ್ಷಣಿಕವಾಗಿ ಸಬಲರಾಗಬೇಕು ಎಂದರು.

ಇನ್ನೂ ಇದೇ ಸಂಧರ್ಭದಲ್ಲಿ ಸಾಹಿತಿ ಟಿಜೆ.ತಿಪ್ಪೇಸ್ವಾಮಿ, ಸುರಕ್ಷಾ ಪಾಲಿ‌ ಕ್ಲಿನಿಕ್ ಮಾಲೀಕರಾದ ಬಿ.ಪರೀಧ್ ಖಾನ್, ಪತ್ರಕರ್ತರ‌ ರಂಗನಾಥ್, ಬೊಮ್ಮಣ್ಣ, ಇತರರು ಇದ್ದರು.

About The Author

Namma Challakere Local News
error: Content is protected !!