ದೇಶದಲ್ಲಿ ಸ್ವಾಮಿನಾಥನ್ ಆಯೋಗದ ವರದಿ ಜಾರಿಯಾದರೆ ಮಾತ್ರ ರೈತರ ಬದುಕು ಹಸನಾಗಲು ಸಾಧ್ಯ: ಕೊಡಿಹಳ್ಳಿ ಚಂದ್ರಶೇಖರ್ ಅಭಿಮತ 

ಚಳ್ಳಕೆರೆ: ದೇಶದಲ್ಲಿ ಅನ್ನ ಹಾಕುವ ರೈತರು ಎಂದಿಗೂ ಸಹ ಬಡವರಾಗಿ ಇದ್ದಾರೆ ಆದರೆ ದಲ್ಲಾಳಿಗಳು ಮಾತ್ರ ಕೋಟ್ಯಾಧಿಪತಿಗಳಾಗಿ ಬದಲಾಗಿದ್ದಾರೆ ಇದಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಕೃಷಿ ನೀತಿಗಳು ಕಾರಣವಾಗಿವೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಆಕ್ರೋಶ ವ್ಯಕ್ತಪಡಿಸಿದರು. 

ತಾಲೂಕಿನ ಬುಡ್ನಹಟ್ಟಿ ಗ್ರಾಮದಲ್ಲಿ ರೈತ ಸಂಘದ ಗ್ರಾಮ ಘಟಕದ ಉದ್ಘಾಟನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು ವಿಧಾನಸಭೆ ಹಾಗೂ ಲೋಕಸಭಾ ಚುನಾವಣೆಗಳಲ್ಲಿ ರೈತರ ಮತವನ್ನು ಪಡೆದ ಪಕ್ಷಗಳು ರೈತರ ಪರವಾದ ಯಾವುದೇ ಯೋಜನೆಗಳನ್ನು ತಮ್ಮ ಪ್ರಣಾಳಿಕೆಗಳಲ್ಲಿ ಘೋಷಿಸದೆ ಇರುವುದು ನೋವಿನ ಸಂಗತಿಯಾಗಿದೆ ಕೇವಲ ರೈತ ಕುಟುಂಬಗಳನ್ನು ಮತ ಬ್ಯಾಂಕ್ ಗಾಗಿ ಚುನಾವಣಾ ಸಂದರ್ಭದಲ್ಲಿ ಬರಪೂರ ಭರವಸೆಗಳನ್ನು ನೀಡುವ ಪಕ್ಷಗಳು ಗೆದ್ದ ನಂತರ ರೈತರನ್ನು ಕಡೆಗಣಿಸುತ್ತಿದ್ದಾರೆ ಇದನ್ನು ರೈತರು ಅರ್ಥ ಮಾಡಿಕೊಂಡು ಚುನಾವಣಾ ಸಂದರ್ಭದಲ್ಲಿ ಎಚ್ಚರಿಕೆಯಿಂದ ಮತ ಚಲಾಯಿಸುವುದು ಅತ್ಯವಶ್ಯಕವಾಗಿದೆ ಎಂದು ಕರೆ ನೀಡಿದರು. 

ರೈತ ಸಂಘದ ರಾಜ್ಯ ಉಪಾಧ್ಯಕ್ಷ ರೆಡ್ಡಿಹಳ್ಳಿ ವೀರಣ್ಣ ಸಂಘದ ಬೋರ್ಡ್ ಅನಾವರಣಗೊಳಿಸಿ ಮಾತನಾಡಿದ ಅವರು ನಂಜುಂಡಸ್ವಾಮಿಯವರ ಪರಿಶ್ರಮದಿಂದಾಗಿ ರೈತರ ಮನೆಗಳಿಗೆ ಬ್ಯಾಂಕ್ ಅಧಿಕಾರಿಗಳು ಬೀಗ ಹಾಕುವುದನ್ನು ನಿಲ್ಲಿಸಿದ್ದರು ಕೊಡಿಹಳ್ಳಿ ಚಂದ್ರಶೇಖರ್ ಅವರು ರೈತ ಸಂಘಕ್ಕಾಗಿ ಹಲವಾರು ಹೋರಾಟಗಳನ್ನು ಮಾಡುತ್ತಾ ಬಂದಿದ್ದಾರೆ ಸರ್ಕಾರಗಳು ಬದಲಾದರೂ ಸಹ ರೈತ ಸಂಘಟನೆಗಳು ಬದಲಾಗಲು ಸಾಧ್ಯವಿಲ್ಲ ರೈತರು ಬಣಗಳಾಗಿ ರೂಪುಗೊಳ್ಳದೆ ಒಗ್ಗಟ್ಟಾಗಿ ಹೋರಾಡಿದಾಗ ಮಾತ್ರ ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುತ್ತದೆ ಎಂದು ಕಿವಿ ಮಾತು ಹೇಳಿದರು.

ಕಾರ್ಯಕ್ರಮಕ್ಕೂ ಮುನ್ನಾ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಧ್ಯಕ್ಷರಾದ‌ ಕೋಡಿಹಳ್ಳಿ ಚಂದ್ರಶೇಖರ್ ಹಾಗೂ ತಾಲೂಕು ಅಧ್ಯಕ್ಷರಾದ ರೆಡ್ಡಿಹಳ್ಳಿ ವೀರಣ್ಣ ಎತ್ತಿನ ಬಂಡಿಯಲ್ಲಿ ಕೂರಿಸಿ  ರೈತರೊಂದಿಗೆ ಗ್ರಾಮದಲ್ಲಿ ಮೇರವಣಿಗೆ ಮಾಡಲಾಯಿತು

ಈ ಸಂದರ್ಭದಲ್ಲಿ ರಾಜ್ಯ ಕಾರ್ಯದರ್ಶಿ ಹನುಂತಪ್ಪ ತುಮಕೂರು ಜಿಲ್ಲಾಧ್ಯಕ್ಷ ಧನುಂಜಯ ಚಂದ್ರಪ್ಪ,ತಾ.ಗೌರವಾಧಯಕ್ಷ ಚನ್ನಕೇಶವಮೂರ್ತಿ ಸಂಘಟನಾ ಕಾರ್ಯದರ್ಶಿ ಟಿ.ತಿಪ್ಪೇಸ್ವಾಮಿ,ಓಬಯ್ಯ, ಮಹಿಳಾ ಘಟಕದ ಅಧ್ಯಕ್ಷೆ ಓಬಮ್ಮ, ಉಪಸ್ಥಿತರಿದ್ದರು.

Namma Challakere Local News
error: Content is protected !!