ಬಸವಾದಿ ಪ್ರಮಥರು ಜೀವನೋದ್ಧಾರಕ್ಕಾಗಿ ಕಾಯಕ, ಆತ್ಮೋದ್ಧಾರಕ್ಕಾಗಿ ಶಿವಯೋಗ, ಜೀವನ್ಮುಕ್ತಿಗಾಗಿ ದಾಸೋಹವನ್ನು ಮಾಡಿದರು ಎಂದು ಶಿವಮೊಗ್ಗ ಪ್ರಭುದೇವ ಜ್ಞಾನಕೇಂದ್ರದ ಶ್ರೀ ಬಸವನವಲಿಂಗ ಶರಣರು ನುಡಿದರು.
ಶ್ರೀ ಮುರುಘರಾಜೇಂದ್ರ ಬೃಹನ್ಮಠದಲ್ಲಿ ನಡೆದ ಬಸವಣ್ಣನವರ ಜಯಂತ್ಯೋತ್ಸವದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬಸವಧರ್ಮ ಅಂತರAಗ ಬಹಿರಂಗ ಒಂದೇ ಆಗಿರುವ ಧರ್ಮ. ಇದು ಅನುಭವ ಧರ್ಮ. ವೇದಿಕೆಯ ಮೇಲೆ ಮಾತಾಡುವ ಧರ್ಮವಲ್ಲ, ಅದು ಮಾತನಾಡಿಸುವ ಧರ್ಮ. ಮಾನವನನ್ನು ಮಹದೇವನನ್ನಾಗಿ ಮಾಡಿದ ಧರ್ಮ ಇದು. ನಾವು ಮಾಡಿಕೊಂಡಿರುವ ದೇವರುಗಳಿಗೆ ಸ್ವತಂತ್ರ ಇಲ್ಲ. ಬೀಗ ಹಾಕಿz್ದೆÃವೆ. ಆದರೆ ಸ್ವತಂತ್ರ ಧರ್ಮ ಬಸವಧರ್ಮ ಲಿಂಗವAತ ಧರ್ಮ. ಈ ಧರ್ಮದ ಮೂಲನೆಲೆ ಜಯಂತಿ ಮಾಡುವುದಲ್ಲ, ರೋಮಾಂಚನವಾದದ್ದು ಈ ಧರ್ಮ. ವಚನ ಸಾಹಿತ್ಯವನ್ನು ಓದಿದವರಿಗೆ ಸಾಕ್ಷಾತ್ಕಾರವಾಗುತ್ತದೆ. ಪ್ರತಿಯೊಬ್ಬರ ಮನೆಯಲ್ಲಿ ಬಸವಧರ್ಮ ಗ್ರಂಥ ಇರಬೇಕೆಂದು ಹೇಳಿದರು.
ಶ್ರೀ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮಿಗಳು ಮಾತನಾಡಿ, ಬಸವಣ್ಣನವರ ತತ್ತ÷್ವಗಳನ್ನು ಶ್ರೀಮಠವು ಅನೂಚಾನವಾಗಿ ಮುಂದುವರೆಸಿಕೊAಡು ಬಂದಿದೆ. ಆ ಜವಾಬ್ದಾರಿ ಇಂದು ನಮ್ಮೆಲ್ಲರ ಮೇಲಿದೆ. ಬಸವಣ್ಣನವರ ತತ್ತ÷್ವಗಳು ಮತ್ತು ಅವರ ಭಾವಚಿತ್ರಗಳು ದಲಿತರ ಮನೆಗೆ ತಲುಪಬೇಕು. ಅವರೂ ಸಹ ಬಸವ ಜಯಂತಿ ಆಚರಿಸುವಂತಾಗಬೇಕು. ನಾವು ಮಾಡಿರುವ ನೂತನ ಮರಿ ಜಯಬಸವ ದೇವರಿಗೆ ಶ್ರೀಮಠದ ಮತ್ತು ತಮ್ಮೆಲ್ಲರ ಸಹಕಾರ ಇರಲಿ ಎಂದರು.

About The Author

Namma Challakere Local News
error: Content is protected !!