ಚಳ್ಳಕೆರೆ ನ್ಯೂಸ್ :
ಗಾಳಿಮಳೆಗೆ ರೇಷ್ಮೆ ಮನೆ ನೆಲ ಸಮ ರೈತ ಕಂಗಾಲು
ಹೌದು ಚಳ್ಳಕೆರೆ ತಾಲೂಕಿನ ರೇಣುಕಾಪುರ ಗ್ರಾಮದ ನಾಗರಾಜಪ್ಪ ಎಂಬುವವರಿಗೆ ಸೇರಿದ ಈ ರೇಷ್ಮೆ ಶೆಡ್ ವಿಪರೀತ ಗಾಳಿಗೆ ಶೇಡ್ ಸಂಪೂರ್ಣವಾಗಿ ನೆಲಕ್ಕೆ ಉರುಳಿದ್ದು ನೂರಾರು ರೇಷ್ಮೆ ಮೊಟ್ಟೆಗಳು ಹಾನಿಗೀಡಾಗಿವೆ
ಲಕ್ಷ ಗಟ್ಟಲೆ ಖರ್ಚು ಮಾಡಿ ರೇಷ್ಮೆ ಬೆಳೆಯುವ ರೈತಇಂದು ಸಂಕಷ್ಟಕ್ಕೆ ಸಿಲುಕಿದ್ದಾನೆ
ಇನ್ನೂ ಕೈಗೆ ಬಂದ ತುತ್ತು, ಬಾಯಿಗೆ ಬಾರದೆ ಹಾಗೆ ರೈತನಿಗೆ ಅಪಾರ ಹಾನಿಯಾಗಿದೆ.
ಇನ್ನೂ ನಮ್ಮ ಚಳ್ಳಕೆರೆ ಟಿವಿಯೊಂದಿಗೆ ಮಾತನಾಡಿದ ನಾವರಾಜಪ್ಪ , ಸ್ವಾಮಿ ತಮ್ಮ ಮಕ್ಕಳಂತೆ ಸಾಕಿದ ರೇಷ್ಮೆ ಹುಳುಗಳು ಈಗಾಗಲೇ
ನಾಲ್ಕನೇ ಜ್ವರಕ್ಕೆ ಬಂದಿರುತ್ತದೆ,ಆದರೆ ಇಂಥ ಸಂದರ್ಭದಲ್ಲಿ ಪ್ರಕೃತಿ ವಿಕೋಪದಿಂದ ಗಾಳಿ ಮಳೆಗೆ ಸಿಲುಕಿ ಸುಮಾರು 5 ಲಕ್ಷ ದಷ್ಟು ನಷ್ಟವಾಗಿದೆ,
ಇನ್ನೂ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ, ಸೂಕ್ತ ಪರಿಹಾರ ಒದಗಿಸಬೇಕೆಂದು ಮನವಿ ಮಾಡಿದ್ದಾನೆ