ಅಪಘಾತದಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದ ಯುವಕರಿಗೆ ಆಪತ್ಬಾಂಧವನಾಗಿ ಬಂದು ಪ್ರಾಣ ಉಳಿಸಿದ ರಾಂಪುರ ಪಿಎಸ್ ಐ ಮಹೇಶ್ ಹೊಸಪೇಟೆ

ಮೊಳಕಾಲ್ಮುರು:-ಅಪಘಾತವಾಗಿ ರಕ್ತ ಮಡುವಿನಲ್ಲಿ ಬಿದ್ದು ಜೀವನ್ಮರಣ ಹೋರಾಟ ನಡೆಸುತ್ತಿದ್ದ ಯುವಕರನ್ನು ಆಸ್ಪತ್ರೆಗೆ ಸೇರಿಸುವ ಮೂಲಕ ರಾಂಪುರ ಪೊಲೀಸ್ ಠಾಣೆಯ ಪಿಎಸ್ ಐ ಮಹೇಶ್ ಹೊಸಪೇಟೆ ಮಾನವೀಯತೆ ಮೆರೆದಿದ್ದಾರೆ.

ರಾಷ್ಟೀಯ ಹೆದ್ದಾರಿಯ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮುರು ತಾಲೂಕಿನ ಹಾನಗಲ್ ಗ್ರಾಮದ ರೈಸ್ ಮಿಲ್ ಬಳಿಯಲ್ಲಿ ಮಂಗಳವಾರ ಸಂಜೆ ಬೈಕ್ ಅಪಘಾತವಾಗಿ,ಇಬ್ಬರು ಯುವಕರು ರಕ್ತ ಮಡುವಿನಲ್ಲಿ ಬಿದ್ದು ಜೀವನ್ಮರಣ ಹೋರಾಟ ನಡೆಸುತ್ತಿದ್ದರು.ಈ ಘಟನೆಯನ್ನು ನೋಡುತ್ತಾ ಕೆಲವರು ವಿಡಿಯೋ ಮಾಡುತ್ತಿದ್ದರೆ, ಇನ್ನೂ ಕೆಲವರು ಆಂಬುಲೆನ್ಸ್ ಗೆ ಫೋನ್ ಮಾಡಿ ಅಪಘಾತವಾಗಿರುವ ಮಾಹಿತಿಯನ್ನು ಹೇಳಿದರು ಸಹ ಅರ್ಧ ಗಂಟೆಗೂ ಹೆಚ್ಚು ಕಾಲ ಕಾದರೂ ಸಕಾಲದಲ್ಲಿ ಯಾವುದೇ ಆಂಬುಲೆನ್ಸ್ ಸ್ಥಳಕ್ಕೆ ಬರಲಿಲ್ಲ.

ಅದಾಗಲೇ ಅಪಘಾತದಲ್ಲಿ ಓರ್ವ ಯುವಕನು ಗಂಭೀರವಾಗಿ ಗಾಯಗೊಂಡ ಕಾರಣ ರಸ್ತೆಯಲ್ಲಿಯೇ ಯುವಕರು ನರಳುತ್ತಿದ್ದನು.ಇನ್ನೂ ಈ ವೇಳೆ ಇದೇ ದಾರಿಯಲ್ಲಿ ಪೋಲಿಸ್ ವಾಹನದಲ್ಲಿ ತೆರಳುತ್ತಿದ್ದ ರಾಂಪುರ ಪಿಎಸ್ಐ ಮಹೇಶ್ ಹೊಸಪೇಟೆ ಅಪಘಾತವಾಗಿರುವುದನ್ನು ಕಂಡು ಕೂಡಲೇ ಸ್ಥಳದಲ್ಲಿ ಗಾಯಾಳುಗಳನ್ನು ಉಪಚರಿಸಿ ತಕ್ಷಣವೇ ಪೊಲೀಸ್ ವಾಹನದಲ್ಲಿಯೇ ಗಾಯಳುಗಳನ್ನು ಕರೆದೋಯ್ದು ಮೊಳಕಾಲ್ಮುರು ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಸೇರಿಸಿದ್ದಾರೆ.

ಅಪಘಾತದಲ್ಲಿ ಗಾಯಗೊಂಡವರ ಪೈಕಿ ತಿಪ್ಪೇಶ್ ಎಂಬುವ ಯುವಕನ್ನು ಗಂಭೀರವಾಗಿ ಗಾಯಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗೆ ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ಕಳುಹಿಸಲಾಗಿದ್ದು, ಇನ್ನೊರ್ವ ಯುವಕನಿಗೆ ಸಾಧಾರಣ ಗಾಯಗಳಾಗಿವೆ. ಈ ಇಬ್ಬರು ಯುವಕರು ಗಡ್ಡದಬೋರಯ್ಯನಹಟ್ಟಿ ಗ್ರಾಮದವರು ಆಗಿದ್ದಾರೆ.

ಅಪಘಾತವಾದಾಗ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡಿದರೆ ವ್ಯಕ್ತಿ ಬದುಕುಳಿಯಬಲ್ಲ ಎಂಬುವ ಘಟನೆಗೆ ಇದು ಸಾಕ್ಷಿಯಾಗಿದ್ದು, ಪಿಎಸ್ಐ ಮಹೇಶ ಹೊಸಪೇಟೆಯವರ ಕಾರ್ಯಕ್ಕೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ.

ಪೊಲೀಸರು ಎಲ್ಲಾ ಮುಗಿದ ಮೇಲೆಯೇ ಬರುವುದು ಎಂದು ಆಡಿಕೊಳ್ಳುವವರ ಮಧ್ಯೆದಲ್ಲಿ ಪಿಎಸ್ ಐ ಮಹೇಶ್ ಹೊಸಪೇಟೆ ಇದಕ್ಕೆ ಆಸ್ಪದ ನೀಡದೇ ಜೀವನ್ಮರಣ ಹೋರಾಟ ನಡೆಸುತ್ತಿದ್ದ ಯುವಕರ ಪ್ರಾಣವನ್ನು ಉಳಿಸಿ ಮಾದರಿಯಾಗಿದ್ದಾರೆ.

Namma Challakere Local News
error: Content is protected !!