ಅಕ್ರಮ ಮಧ್ಯ ತಡೆಯಲು ಗ್ರಾಮಸ್ಥರ ಆಗ್ರಹ

ಚಳ್ಳಕೆರೆ
ಪ್ರತಿ ಗ್ರಾಮಗಳಲ್ಲಿ ಹೆಗ್ಗಿಲದೆ ಅಕ್ರಮ ಮಧ್ಯ ಮಾರಾಟ ಹಾಗೂ ಸಾಗಾಟ ನಡೆಯುತ್ತಿದ್ದು ಇದಕ್ಕೆ ಕಡಿವಾಣ ಹಾಕಲು ಗ್ರಾಮದ ಮುಖ್ಯಸ್ಥರು ಅಬಕಾರಿ ಅಧಿಕಾರಿಗಳಿಗೆ ಮಾಹಿತಿ ನೀಡಿ ಎಂದು ಅಬಕಾರಿ ನಿರೀಕ್ಷಕ ಸಿ ನಾಗರಾಜ್ ತಿಳಿಸಿದರು,

ಇವರು ತಾಲೂಕಿನ ಕಾಲುವೆಹಳ್ಳಿ ಗ್ರಾಮ ಪಂಚಾಯಿತಿಯ ಖ್ಯಾತ ಗೊಂಡನಹಳ್ಳಿಯ ಪಂಚಾಯಿತಿ ಆವರಣದಲ್ಲಿ ಸಾರ್ವಜನಿಕರ ಕುರಿತು ಅಕ್ರಮ ಮಧ್ಯ ಮಾರಾಟ ಹಾಗೂ ಸಾಗಾಟದ ಬಗ್ಗೆ ಚರ್ಚೆ ಮಾಡಿ ಮಾತನಾಡಿದರು ,

ಇತ್ತೀಚಿನ ದಿನಗಳಲ್ಲಿ ಗ್ರಾಮಾಂತರ ಪ್ರದೇಶಗಳಲ್ಲಿ ಅತಿ ಹೆಚ್ಚು ಅಕ್ರಮ ಮಧ್ಯ ಸಾಗಾಟ ಹಾಗೂ ಮಾರಾಟವಾಗುತ್ತಿದ್ದು ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಗ್ರಾಮಸ್ಥರಲ್ಲಿ ಜನ ಜಾಗೃತಿ ಮೂಡಿಸಿದ್ದೇವೆ ಚಳ್ಳಕೆರೆ ತಾಲೂಕಿನಲ್ಲಿ 350 ಗ್ರಾಮಗಳಿದ್ದು ಎಲ್ಲಾ ಗ್ರಾಮಗಳಿಗೆ ನಾವು ಹೋಗಿ ಹಿಡಿಯಲು ಸಾಧ್ಯವಾಗುವುದಿಲ್ಲ ಈ ಹಿನ್ನೆಲೆಯಲ್ಲಿ ಆಯಾ ಗ್ರಾಮದ ಮುಖ್ಯಸ್ಥರು ಅಕ್ರಮ ಮಧ್ಯ ಹಾಗೂ ಸಾಗಾಟದ ಬಗ್ಗೆ ತಿಳಿದುಬಂದಲ್ಲಿ ಅಬಕಾರಿ ಇಲಾಖೆಗೆ ದೂರವಾಣಿಯ ಮೂಲಕ ತಿಳಿಸಿದರೆ ಅವರ ಹೆಸರನ್ನು ಗೌಪ್ಯವಾಗಿ ಇಟ್ಟು ಅಕ್ರಮ ಮಧ್ಯ ಮಾರಾಟ ತಡೆಯಲು ಸಾಧ್ಯವಾಗುತ್ತದೆ ದೂರವಾಣಿ ಸಂಖ್ಯೆ 112 ಕರೆ ಮಾಡಿ ತಿಳಿಸಿ ಗ್ರಾಮದಲ್ಲಿ ನಡೆಯುವ ಎಲ್ಲಾ ಅಕ್ರಮ ಮಧ್ಯವನ್ನು ತಡೆಯಲು ಸಾಧ್ಯ ಎಂದರು

ಈ ವೇಳೆ ಗ್ರಾಮದ ಮುಖಂಡರುಗಳು ಗ್ರಾಮದ ಮಹಿಳೆಯರಿಗೆ ಕುಡಿತದ ದುಷ್ಪರಿಣಾಮದ ಬಗ್ಗೆ ಮಾಹಿತಿ ನೀಡಿದರು

ಇನ್ನು ಈ ಸಂದರ್ಭದಲ್ಲಿ ಉಪನಿರೀಕ್ಷಕರು ರೇಖಾ ಸೋಮಶೇಖರ್ ತಿಪ್ಪಯ್ಯ ಸೇರಿದಂತೆ ಅನೇಕ ಮಹಿಳಾ ಸಂಘಟನೆಗಳು ಊರಿನ ಗ್ರಾಮಸ್ಥರು ಹಾಜರಿದ್ದರು

Namma Challakere Local News
error: Content is protected !!