ಚಳ್ಳಕೆರೆ ನ್ಯೂಸ್ :
ಅದ್ದೂರಿಯಾಗಿ ಜರುಗಿದ ರಾಮಲಿಂಗೇಶ್ವರ ಜಾತ್ರಾ
ಮಹೋತ್ಸವ
ಚಳ್ಳಕೆರೆ ವಿಧಾನ ಸಭಾ ಕ್ಷೇತ್ರವ್ಯಾಪ್ತಿಯ
ತುರುವನೂರು ಹೋಬಳಿಯ ಬೆಳಗಟ್ಟ ಗ್ರಾಮ ಪಂಚಾಯತಿಯ
ಹಾಯ್ಕಲ್ ಗ್ರಾಮದಲ್ಲಿ 11ನೇ ವರ್ಷದ ರಾಮಲಿಂಗೇಶ್ವರಸ್ವಾಮಿ
ಜಾತ್ರಾ, ಕಾರ್ತಿಕೋತ್ಸವ ಸಡಗರ ಸಂಭ್ರಮದಿಂದ ಆಚರಿಸಿದರು.
ಕಳೆದ ಎರಡು ದಿನಗಳಿಂದ ಜರುಗಿದ ಜಾತ್ರೆ ಬೆಳಿಗ್ಗೆಯಿಂದಲೇ ರಥೋತ್ಸವ ಸಂಬಂಧಿಸಿದಂತೆ
ದೇವಾಲಯದಲ್ಲಿ ಪೂಜೆ ಕಾರ್ಯಗಳು ನಡೆದವು.
ಹಾಯ್ಕಲ್
ಗ್ರಾಮದ ಯುವಕ ವಿಷ್ಣು ರೆಡ್ಡಿ 17,000 ರೂಪಾಯಿಗೆ
ರಾಮಲಿಂಗೇಶ್ವರನ ಮುಕ್ತಿ ಬಾವುಟ ಹರಾಜು ಪಡೆದರು.
ಹಾಯ್ಕಲ್
ಗ್ರಾಮದಲ್ಲಿ ಎಲ್ಲಾ ಜಾತಿ ಜನಾಂಗದವರು ದೇವರ ಕೃಪೆಗೆ ಪಾತ್ರರಾಗಿ ಹಬ್ಬವನ್ನು
ಆಚರಿಸಿದರು.