ಚಳ್ಳಕೆರೆ ನ್ಯೂಸ್ : ರಾಜ್ಯಾದ್ಯಂತ 10 ನೇ ತರಗತಿ ಬೋರ್ಡ್ ಪರೀಕ್ಷೆಗೆ ಹಾಜರಾದ
ಅಭ್ಯರ್ಥಿಗಳು ಕೆಎಸ್ಇಎಬಿ 10 ನೇ ತರಗತಿ ಫಲಿತಾಂಶಗಳನ್ನು
ಕರ್ನಾಟಕ ಫಲಿತಾಂಶಗಳ ಅಧಿಕೃತ ವೆಬ್ ಸೈಟ್ karresults.nic.in
ನಲ್ಲಿ ಫಲಿತಾಂಶ ನೋಡಬಹುದು.
ಕರ್ನಾಟಕ ಶಾಲಾ ಪರೀಕ್ಷೆಗಳು
ಮತ್ತು ಮೌಲ್ಯಮಾಪನ ಮಂಡಳಿಯು 2024ನೇ ಸಾಲಿನ SSLC
ಫಲಿತಾಂಶವನ್ನು ನಾಳೆ ಬೆಳಗ್ಗೆ 10.30 ಗಂಟೆಗೆ ಪ್ರಕಟಿಸಲಿದೆ.
SSLC ಪರೀಕ್ಷೆಗೆ ರಾಜ್ಯಾದ್ಯಂತ ಒಟ್ಟು 8,69,968 ವಿದ್ಯಾರ್ಥಿಗಳು
ನೋಂದಣಿ ಮಾಡಿಕೊಂಡಿದ್ದರು. ಅದರದಲ್ಲಿ 4,41,910
ಬಾಲಕರಾದರೆ, 4,28,058 ಬಾಲಕಿಯರು. ಒಟ್ಟು ವಿದ್ಯಾರ್ಥಿಗಳ
ನೋಂದಣಿಯಲ್ಲಿ 8,10,368 ಸರ್ಕಾರಿ ಶಾಲಾ ವಿದ್ಯಾರ್ಥಿಗಳು, 18,225
ಖಾಸಗಿ ವಿದ್ಯಾರ್ಥಿಗಳು ಹಾಗೂ 41,375 ಪುನರಾವರ್ತಿತ
ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದರು.
ಎಲ್ಲಾ ವಿಷಯಗಳ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯವು
ಮುಕ್ತಾಯವಾಗಿರುತ್ತದೆ.
ಫಲಿತಾಂಶವನ್ನು https://karresults.nic.in ಜಾಲತಾಣದಲ್ಲಿ
ದಿನಾಂಕ:09.05.2024ರ ಬೆಳಗ್ಗೆ 10.30 ಗಂಟೆಯ ನಂತರ
ವೀಕ್ಷಿಸಬಹುದಾಗಿದೆ.
ಈ ರೀತಿ ಫಲಿತಾಂಶ ಚೆಕ್ ಮಾಡಿ
ಅಧಿಕೃತ ಇಲಾಖೆಯ ಅಧಿಕೃತ ವೆಬ್ಸೈಟ್ಗಳಾದ
kseab.karnataka.gov.in
karresults.nic.in
ವೀಕ್ಷಿಸಲು ಮತ್ತು ಡೌನ್ಲೋಡ್ ಮಾಡಲು ಅವಕಾಶವಿದೆ ಎಂದು
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ ತಿಳಿಸಿದೆ.
ಫಲಿತಾಂಶ ನೋಡುವುದು, ಡೌನ್ಲೋಡ್
ಮಾಡುವುದು ಹೇಗೆ?
ಅಧಿಕೃತ ವೆಬ್ಸೈಟ್ karresults.nic.in ಗೆ ಭೇಟಿ ನೀಡಿ.
ಮುಖಪುಟದಲ್ಲಿ SSLC Results 2024 ಲಿಂಕ್ ಅನ್ನು ಕ್ಲಿಕ್ ಮಾಡಿ
ಹೊಸ ಲಾಗಿನ್ ಪುಟವು ತೆರೆಯುತ್ತದೆ.
ನಿಮ್ಮ ಅಪ್ಲಿಕೇಶನ್ ಸಂಖ್ಯೆ ಮತ್ತು ಜನ್ಮದಿನಾಂಕವನ್ನು ನಮೂದಿಸಿ
ಆಗ ಫಲಿತಾಂಶ ಕಾಣಿಸಿಕೊಳ್ಳುತ್ತದೆ, ಅಲ್ಲಿ ಡೌನ್ಲೋಡ್
ಮಾಡಬಹುದು.