ಚಳ್ಳಕೆರೆ ನ್ಯೂಸ್ :
ಅರಸನ ಕೆರೆಯಲ್ಲಿ ಮೀನುಗಳ ಮರಣ ಹೋಮ
ಚಿತ್ರದುರ್ಗ ಮುರುಘಾ ಮಠದ ಎದುರಿನ ಅರಸನ ಕೆರೆಯಲ್ಲಿ
ಮೀನುಗಳ ಮರಣ ಹೋಮವಾಗಿದೆ.
ಮೀನುಕೃಷಿ ಮಾಡಲು
ಮೀನುಗಾರಿಕೆ ಇಲಾಖೆಯಿಂದ ಕೆರೆಗೆ ಸಾವಿರಾರು ಮೀನುಗಳನ್ನು
ತಂದು ಬಿಡಲಾಗಿದೆ.
ನಗರದ ತ್ಯಾಜ್ಯ ಹಾಗೂ ಕಲುಷಿತ ನೀರು
ಈಕೆರೆಗೆ ಹರಿಯುತ್ತಿರುವುದರಿಂದ
ಇದರಲ್ಲಿರುವ ಮೀನು ಕೂಡ ಸಾಯುತ್ತಿವೆ.
ರಾಶಿ ರಾಶಿ ಮೀನುಗಳು ಸತ್ತು ಕೆರೆಯ ದಡಕ್ಕೆ ಬಂದು ಸೇರುತ್ತಿವೆ.
ಕೆರೆ ಕಲುಷಿತಗೊಂಡು ದುರ್ವಾಸನೆ ಬರಲಾಂಭಿಸಿದೆ.
ಕೂಡಲೇ ಸಂಬಂಧಿಸಿದವರು
ಇದರ ಸ್ವಚ್ಛತೆಗೆ ಮುಂದಾಗಬೇಕೆಂದು ಎಂಕೆ ಹಟ್ಟಿಯ ನಾಗರಾಜ್
ಆಗ್ರಹಿಸಿದ್ದಾರೆ.