ಚಳ್ಳಕೆರೆ ನ್ಯೂಸ್ :
ಹವಾಮಾನ ವೈಪರೀತ್ಯ: ಆರೋಗ್ಯದ ಇರಲಿ ಕಾಳಜಿ
ಹವಾಮಾನ ವೈಪರಿತ್ಯದಿಂದಾಗಿ ಆರೋಗ್ಯದ ಮೇಲೆ ಅನೇಕ
ದುಷ್ಪಾರಿಣಾಮಗಳು ಉಂಟಾಗುತ್ತಿದ್ದು,
ಸಾರ್ವಜನಿಕರು
ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕೆಂದು ಚಿತ್ರದುರ್ಗ
ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಬಿ. ವಿ. ಗಿರೀಶ್ ಸಲಹೆ
ನೀಡಿದ್ದಾರೆ
ಹೊಳಲ್ಕೆರೆ ಕ್ಷೇತ್ರದ ಮುದ್ದಾಪುರ ಪ್ರಾಥಮಿಕ
ಆರೋಗ್ಯ ಕೇಂದ್ರದಲ್ಲಿ ಸೂರ್ಯಾಘಾತ ನಿರ್ವಹಣೆ ಬಗೆಗಿನ
ಕಾರ್ಯಕ್ರಮದಲ್ಲಿ ಮಾತಾಡಿದರು.
ಯಾರೂ ಕಾರಣವಿಲ್ಲದೇ
ಬಿಸಿಲಿನಲ್ಲಿ ಸುತ್ತಾಡಬಾರದು.
ನೀರು, ದ್ರವರೂಪದ ಆಹಾರದ
ಜೊತೆಗೆ ಓ. ಆರ್. ಎಸ್ ದ್ರಾವಣ ಸೇವಿಸಬೇಕೆಂದರು.